ಶನಿವಾರ, ಜುಲೈ 2, 2022
22 °C

ಬಾಲಿವುಡ್ ನಿರ್ದೇಶನದತ್ತ ಐಶ್ವರ್ಯಾ ರಜನಿಕಾಂತ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ತಮಿಳಿನಲ್ಲಿ ‘3‘ ಮತ್ತು ‘ವೈ ರಾಜಾ ವೈ‘ ಚಿತ್ರಗಳನ್ನು ನಿರ್ದೇಶಿಸಿ ಹೆಸರು ಗಳಿಸಿರುವ ಐಶ್ವರ್ಯಾ ರಜನಿಕಾಂತ್, ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

‘ಒಹ್ ಸಾಥಿ ಚಲ್‘ ಹೆಸರಿನ ಹಿಂದಿ ಚಿತ್ರವನ್ನು ಐಶ್ವರ್ಯಾ ನಿರ್ದೇಶಿಸುತ್ತಿದ್ದಾರೆ. ಈ ಕುರಿತು ಸೋಮವಾರ ಅವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.

ಪ್ರೇಮಕಥೆಯೊಂದನ್ನು ಈ ಸಿನಿಮಾ ಹೊಂದಿರುತ್ತದೆ ಎನ್ನುವ ಸುಳಿವನ್ನು ಚಿತ್ರದ ಪೋಸ್ಟರ್ ನೀಡುತ್ತಿದ್ದು, ಚಿತ್ರ ನಿರ್ಮಾಣದ ಪೂರ್ವ ತಯಾರಿ ಕೆಲಸಗಳು ನಡೆಯುತ್ತಿದೆ ಎಂದು ಐಶ್ವರ್ಯಾ ಹೇಳಿದ್ದಾರೆ.

ಐಶ್ವರ್ಯಾ ಅವರು ತಮಿಳು ನಟ ಧನುಷ್ ಜತೆಗಿನ ದಾಂಪತ್ಯ ಜೀವನ ಕೊನೆಗೊಳಿಸಿ, ವಿಚ್ಛೇದನ ಪಡೆದುಕೊಂಡಿದ್ದಾರೆ.

ಕಳೆದ ವಾರ ಬಿಡುಗಡೆಯಾಗಿದ್ದ ಐಶ್ವರ್ಯಾ ನಿರ್ದೇಶನದ ಅಲ್ಬಂ ಸಾಂಗ್ ಒಂದಕ್ಕೆ ಧನುಷ್ ಶುಭ ಹಾರೈಸಿ, ಗೆಳತಿ ಎಂದು ಐಶ್ವರ್ಯಾರನ್ನು ಕರೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು