ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಮಲ್‌ ಹೊಸ ಜಾಹೀರಾತಿನಲ್ಲಿ ಅಕ್ಷಯ್‌: ನೆಟ್ಟಿಗರ ಆಕ್ರೋಶ, ನಟನ ಸ್ಪಷ್ಟನೆ

Published 10 ಅಕ್ಟೋಬರ್ 2023, 3:20 IST
Last Updated 10 ಅಕ್ಟೋಬರ್ 2023, 3:20 IST
ಅಕ್ಷರ ಗಾತ್ರ

ಮುಂಬೈ: ಪಾನ್‌ ಮಸಾಲ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಇದೀಗ ವಿಮಲ್‌ ಪಾನ್‌ ಮಸಾಲದ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಈ ಬಗ್ಗೆ ಸ್ವತಃ ಅಕ್ಷಯ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಕಳೆದ ವರ್ಷ ವಿಮಲ್‌ ಪಾನ್‌ ಮಸಾಲ ಜಾಹೀರಾತಿನಲ್ಲಿ ನಟರಾದ ಶಾರುಖ್‌ ಖಾನ್ ಮತ್ತು ಅಜಯ್‌ ದೇವಗನ್‌ ಜೊತೆ ಅಕ್ಷಯ್‌ ಕುಮಾರ್ ಕಾಣಿಸಿಕೊಂಡಿದ್ದರು. ಟೀಕೆಗಳು ವ್ಯಕ್ತವಾಗುದ್ದಿದಂತೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಅಕ್ಷಯ್‌, ಇನ್ನು ಮುಂದೆ ಪಾನ್‌ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅಲ್ಲದೇ ಬ್ಯಾಂಡ್‌ನೊಂದಿಗೆ ಒಪ್ಪಂದ ಕಳಚಿಕೊಂಡಿರುವುದಾಗಿಯು ತಿಳಿಸಿದ್ದರು.

ಹೊಸ ಜಾಹೀರಾತಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅಕ್ಷಯ್‌ ಕುಮಾರ್‌ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ‘ಅಂಬಾಸಿಡರ್‌ ಆಗಿ ಮರಳಿ ಬಂದಿರುವುದಾ? ನಕಲಿ ಸುದ್ದಿಗಿಂತ ಸತ್ಯ ಸುದ್ದಿಗಳ ಬಗ್ಗೆ ಆಸಕ್ತಿ ಹೊಂದಿರುವವರಿಗೆ ನಾನಿಲ್ಲಿ ಸ್ಪಷ್ಟನೆ ನೀಡುತ್ತಿದ್ದೇನೆ. ಈ ಜಾಹೀರಾತನ್ನು 2021 ಅಕ್ಟೋಬರ್‌ 13ರಲ್ಲಿ ಚಿತ್ರೀಕರಿಸಲಾಗಿದೆ. ವಿಮಲ್‌ನೊಂದಿಗೆ ಒಪ್ಪಂದ ಮುರಿದುಕೊಂಡ ಮೇಲೆ ಅದರ ಜೊತೆಗೆ ನಾನು ಯಾವುದೇ ಸಂಬಂಧ ಹೊಂದಿಲ್ಲ. ಈಗಾಗಲೇ ಚಿತ್ರೀಕರಿಸಿದ ಜಾಹೀರಾತುಗಳನ್ನು 2023ರ ನವೆಂಬರ್‌ ಅಂತ್ಯದವರೆಗೆ ಬಳಸಿಕೊಳ್ಳುವ ಹಕ್ಕು ಅವರಿಗಿದೆ’ ಎಂದು ಹೇಳಿದರು.

ಅಕ್ಷಯ್‌ ನಟನೆಯ ‘ಮಿಷನ್‌ ರಾಣಿಗಂಜ್‌’ ಚಿತ್ರ ಬಿಡುಗಡೆಗೊಂಡಿದ್ದು, ಚಿತ್ರದ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT