ನಿರ್ದೇಶಕ ರಾಘವ ಲಾರೆನ್ಸ್ ಮತ್ತು ನಟ ಅಕ್ಷಯ್ ಕುಮಾರ್ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಲಕ್ಷ್ಮಿ ಬಾಂಬ್’ ಚಿತ್ರ ನವೆಂಬರ್ 9ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ.

ಭಾರತದಲ್ಲಿ ಚಿತ್ರಮಂದಿರಗಳು ಪುನರಾರಂಭಗೊಳ್ಳದಿರುವ ಪರಿಣಾಮ ಚಿತ್ರತಂಡ ಒಟಿಟಿಯ ಮೊರೆ ಹೋಗಿದ್ದು ಎಲ್ಲರಿಗೂ ಗೊತ್ತು. ಆದರೆ, ಹೊಸ ಸುದ್ದಿ ಅಲ್ಲ. ಅಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ಬಿಡುಗಡೆಯಾದರೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುಎಇಯಲ್ಲಿ ಮಾತ್ರ ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಲಿದೆ.

ಕೋವಿಡ್–19 ಭಾರತದಲ್ಲಿ ಚಿತ್ರಮಂದಿರಗಳ ಪುನರಾರಂಭಕ್ಕೆ ಅಡ್ಡಿಯಾಗಿದೆ. ಆದರೆ, ಕೆಲವು ದೇಶಗಳಲ್ಲಿ ಥಿಯೇಟರ್‌ಗಳು ಕಾರ್ಯಾರಂಭ ಮಾಡಿವೆ. ಹಾಗಾಗಿ, ಅಲ್ಲಿನ ಚಿತ್ರಮಂದಿರಗಳಲ್ಲಿ ‘ಲಕ್ಷ್ಮಿ ಬಾಂಬ್’ ಬಿಡುಗಡೆಯಾಗಲಿದೆ. ಅಂದಹಾಗೆ ಭಾರತ, ಅಮೆರಿಕ, ಕೆನಡಾ ಮತ್ತು ಯುಕೆಯಲ್ಲಿ ಒಟಿಟಿಯಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ಫಾಕ್ಸ್ ಸ್ಟಾರ್ ಹಿಂದಿ ಟ್ವೀಟ್ ಮಾಡಿದೆ.

ಜೊತೆಗೆ, ಅಕ್ಷಯ್ ಕುಮಾರ್ ಎರಡು ಅವತಾರದಲ್ಲಿ ಕಾಣಿಸಿಕೊಂಡಿರುವ ಹೊಸ ಪೋಸ್ಟರ್ ಅನ್ನೂ ಬಿಡುಗಡೆ ಮಾಡಿದೆ. ಇದರಲ್ಲಿ ಅಕ್ಷಯ್‌ಗೆ ಕಿಯಾರ ಅಡ್ವಾಣಿ ಜೋಡಿಯಾಗಿದ್ದಾರೆ.

‘ನನ್ನ ಮೂವತ್ತು ವರ್ಷದ ವೃತ್ತಿಬದುಕಿನಲ್ಲಿ ಎಂದಿಗೂ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಪಾತ್ರ ನಿಭಾಯಿಸುವುದು ಸವಾಲಿನಿಂದ ಕೂಡಿತ್ತು. ನನ್ನ ಬೌದ್ಧಿಕ ಸಾಮರ್ಥ್ಯವನ್ನೇ ಪಣಕ್ಕಿಟ್ಟು ಪಾತ್ರಕ್ಕೆ ಜೀವ ತುಂಬಿದ್ದೇನೆ. ಈ ಎಲ್ಲ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು’ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಅಕ್ಷಯ್ ಹೇಳಿದ್ದು ಉಂಟು.

‘ಇಂತಹ ಪಾತ್ರ ನಿಭಾಯಿಸುವುದು ಕಷ್ಟಕರ. ಯಾವುದೇ ಸಮುದಾಯದ ಮನಸ್ಸನ್ನು ನೋಯಿಸದೆ ಜಾಗ್ರತೆವಹಿಸಿ ಈ ಪಾತ್ರ ನಿಭಾಯಿಸಿದ್ದೇನೆ’ ಎಂದಿದ್ದರು.

‘ಲಕ್ಷ್ಮಿ ಬಾಂಬ್’ ತಮಿಳಿನ ‘ಕಾಂಚನ’ ಚಿತ್ರದ ರಿಮೇಕ್. ತಮಿಳಿನಲ್ಲಿಯೂ ಈ ಚಿತ್ರಕ್ಕೆ ಲಾಘವ ಲಾರೆನ್ಸ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.