ಮಂಗಳವಾರ, ಜುಲೈ 5, 2022
27 °C

ಹಾಲಿವುಡ್‌ಗೆ ಹಾರುತ್ತಿರುವ ನಟಿ ಆಲಿಯಾ ಭಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನಟಿ ಆಲಿಯಾ ಭಟ್‌ ಮತ್ತು ನಟಿ ಗ್ಯಾಲ್‌ ಗೆಡೋಟ್‌

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಪಾತ್ರದ ಮೂಲಕ ಪ್ರಶಂಸೆ ಗಿಟ್ಟಿಸಿರುವ ಬಾಲಿವುಡ್‌ ನಟಿ ಆಲಿಯಾ ಭಟ್‌ ಹಾಲಿವುಡ್‌ ಪ್ರವೇಶಿಸಲಿದ್ದಾರೆ. ಪತ್ತೇದಾರಿ ಥ್ರಿಲ್ಲರ್‌ ಕಥೆಯಿರುವ 'ಹಾರ್ಟ್‌ ಆಫ್‌ ಸ್ಟೋನ್‌' ಮೂಲಕ ಜಾಗತಿಕ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ವಂಡನ್‌ ವುಮನ್‌' ಸಿನಿಮಾ ಖ್ಯಾತಿಯ ನಟಿ ಗ್ಯಾಲ್‌ ಗೆಡೋಟ್‌ ಅವರೊಂದಿಗೆ ಹಾಲಿವುಡ್‌ ಸಿನಿಮಾದಲ್ಲಿ ಆಲಿಯಾ ಅಭಿನಯಿಸಲಿದ್ದಾರೆ. ಟಾಮ್‌ ಹಾರ್ಪರ್‌ ಅವರು ಹಾರ್ಟ್‌ ಆಫ್‌ ಸ್ಟೋನ್‌ ಸಿನಿಮಾ ನಿರ್ದೇಶಿಸುತ್ತಿದ್ದು, ನೆಟ್‌ಫ್ಲಿಕ್ಸ್‌ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಡೇವಿಡ್‌ ಎಲಿನ್ಸನ್‌, ಡಾನಾ ಗೋಲ್ಡ್‌ ಬರ್ಗ್‌, ಡಾನ್‌ ಗ್ರ್ಯಾನ್ಗರ್‌, ಬೋನಿ ಕರ್ಟಿಸ್‌ ಸೇರಿದಂತೆ ಹಲವರು ಈ ಸಿನಿಮಾದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

'ಗ್ಯಾಲ್‌ ಗೆಡೋಟ್‌ ಮತ್ತು ಜೇಮಿ ಡಾರ್ನನ್‌ ಅವರೊಂದಿಗೆ ಆಲಿಯಾ ಭಟ್‌ ಹೊಸ ಸಿನಿಮಾ ಹಾರ್ಟ್‌ ಆಫ್‌ ಸ್ಟೋನ್‌ನಲ್ಲಿ ಅಭಿನಯಿಸುತ್ತಿದ್ದಾರೆ' ಎಂದು ನೆಟ್‌ಫ್ಲಿಕ್ಸ್‌ ಟ್ವೀಟಿಸಿದೆ.

 

ಆಲಿಯಾ ಅಭಿನಯದ ಸಂಜಯ್‌ ಲೀಲಾ ಭನ್ಸಾಲಿ ಅವರ ಗಂಗೂಬಾಯಿ ಕಾಠಿಯಾವಾಡಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಿದ್ದು, ಒಂದು ವಾರದಲ್ಲಿ ₹100 ಕೋಟಿ ಗಳಿಕೆಯನ್ನು ದಾಟಿದೆ. ರಣಬೀರ್‌ ಕಪೂರ್‌ ಜೊತೆ ಅಭಿನಯಿಸಿರುವ ಮೊದಲ ಸಿನಿಮಾ 'ಬ್ರಹ್ಮಾಸ್ತ್ರ' ಬಿಡುಗಡೆಗೆ ಸಜ್ಜಾಗಿದೆ. ಅಮಿತಾಬ್‌ ಬಚ್ಚನ್‌, ನಾಗಾರ್ಜುನ ಅಕ್ಕಿನೇನಿ ಹಾಗೂ ಮೌನಿ ರಾಯ್‌ ಸೇರಿದಂತೆ ಹಲವು ಖ್ಯಾತ ನಟರು ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷ ಸೆಪ್ಟೆಂಬರ್‌ 9ರಂದು ಸಿನಿಮಾ ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು