ಶನಿವಾರ, ಸೆಪ್ಟೆಂಬರ್ 18, 2021
22 °C

ನಗು, ಕನಸು ಮತ್ತು ಬೆಳಕು: ಪ್ರವಾಸದ ಚಿತ್ರ ಹಂಚಿಕೊಂಡ ಆಲಿಯಾ ಭಟ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Alia Bhatt Instagram Post

ಬೆಂಗಳೂರು: ನಟಿ ಆಲಿಯಾ ಭಟ್‌ಗೆ ಪ್ರವಾಸ ಹೋಗುವುದೆಂದರೆ ತುಂಬಾ ಇಷ್ಟ. ಅವರು ಪ್ರವಾಸದ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೂಡ ಪೋಸ್ಟ್ ಮಾಡುತ್ತಿರುತ್ತಾರೆ.

ಆಲಿಯಾ ಭಟ್, ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿ ಇದ್ದಾರೆ.

ಇದೇ ಸಂದರ್ಭದಲ್ಲಿ ಆಲಿಯಾ, ಮೇಕಪ್ ಮತ್ತು ಯಾವುದೇ ಫಿಲ್ಟರ್ ಇಲ್ಲದೆಯೇ ಫೋಟೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ನಗು, ಕನಸು ಮತ್ತು ಬೆಳಗು ಎಂಬ ಅಡಿಬರಹವನ್ನು ಆಲಿಯಾ ಫೋಟೋ ಪೋಸ್ಟ್‌ಗೆ ನೀಡಿದ್ದು, ಕಪ್ಪು ಬಣ್ಣದ ಕ್ಯಾಪ್ ಒಂದನ್ನು ಕೂಡ ಧರಿಸಿದ್ದಾರೆ.

ಆಲಿಯಾ ಭಟ್ ಚಿತ್ರವನ್ನು ಎಂಟು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ಜ್ಯಾಕ್ವೆಲಿನ್ ಫರ್ನಾಂಡಿಸ್, ಮೌನಿ ರಾಯ್, ಮನೀಷ್ ಮಲ್ಹೋತ್ರಾ ಸಹಿತ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು