ಸೋಮವಾರ, ಜುಲೈ 4, 2022
21 °C

ವಾರ್‌: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಹೃತಿಕ್‌, ಟೈಗರ್‌ ಶ್ರಾಫ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರಮಂದಿರವೊಂದರ ಬಳಿ ಟೈಗರ್‌ ಶ್ರಾಫ್‌

ಬೆಂಗಳೂರು: ಹೃತಿಕ್‌ ರೋಷನ್‌ ಹಾಗೂ ಟೈಗರ್‌ ಶ್ರಾಫ್ ನಟಿಸಿರುವ ಬಾಲಿವುಡ್‌ನ ‘ವಾರ್‌’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಮೊದಲ ದಿನದ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ.

ವಿದೇಶ ಸೇರಿದಂತೆ ಭಾರತದ 5350 ಚಿತ್ರಮಂದಿರಗಳಲ್ಲಿ ‘ವಾರ್‌’ ಸಿನಿಮಾ ಬುಧವಾರ ಬಿಡುಗಡೆಯಾಗಿದೆ.  ಭಾರತದ 4000 ಹಾಗೂ ವಿದೇಶಗಳಲ್ಲಿನ 1350 ಚಿತ್ರಮಂದಿರುಗಳಲ್ಲಿ ತೆರೆಗೆ ಬಂದಿರುವ ‘ವಾರ್‌’ ಸಿನಿಮಾದ ಮೊದಲ ದಿನದ ಗಳಿಕೆ ಬರೊಬ್ಬರಿ ₹ 53.35 ಕೋಟಿ. 

ಹಾಲಿವುಡ್‌ನ ಅವೆಂಜರ್‌ ದಿ ಎಂಡ್‌ ಗೇಮ್‌ ಸಿನಿಮಾ ₹ 50.10 ಕೋಟಿ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ನಂತರದ ಸ್ಥಾನಗಳಲ್ಲಿ ಥಂಗ್ಸ್‌ ಆಫ್‌ ಹಿಂದೂಸ್ತಾನ್‌ (₹ 52.25 ಕೋಟಿ), ಹ್ಯಾಪಿ ನ್ಯೂ ಇಯರ್‌ (₹ 44.97 ಕೋಟಿ), ಭಾರತ್‌ (₹ 42.30 ಕೋಟಿ) ಸಿನಿಮಾಗಳು ಇದ್ದವು. ಈ ಎಲ್ಲಾ ದಾಖಲೆಗಳನ್ನು ಮುರಿದು ‘ವಾರ್‌’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

ಇದನ್ನೂ ಓದಿ:  ಹೃತಿಕ್ –ಟೈಗರ್‌ ‘ವಾರ್‌’ ಸಾಟಿಯಾಗದ ಸೆಟ್‌

ಹೃತಿಕ್‌ , ಟೈಗರ್‌ ಶ್ರಾಫ್ ಅವರ ಇದುವರೆಗಿನ ದಾಖಲೆಗಳನನ್ನು ಈ ಸಿನಿಮಾ ಮುರಿದಿದೆ. ‘ವಾರ್‌’ ಮೂಲಕ ಟೈಗರ್‌ ಶ್ರಾಫ್‌ ಹೊಸ ಇಮೇಜ್‌ ಪಡೆದುಕೊಂಡಿದ್ದಾರೆ. ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳಿಗಾಗಿ ಈ ಸಿನಿಮಾ ದಾರಿ ಮಾಡಿಕೊಟ್ಟಿದೆ. ಕಳೆದ ಕೆಲವು ವರ್ಷಗಳಿಂದ ವೈಯಕ್ತಿಕ ಜಂಜಡಗಳಲ್ಲಿ ಬಸವಳಿದಿದ್ದ ಹೃತಿಕ್‌ ಅವರಿಗೂ ‘ವಾರ್‌’ ಕಿಕ್‌ ಕೊಟ್ಟಿದೆ. 

ನಿರ್ಮಾಪಕ ಆದಿತ್ಯ ಚೋಪ್ರ ₹ 600 ಕೋಟಿ ವೆಚ್ಚದಲ್ಲಿ ವಾರ್‌ ಚಿತ್ರ ನಿರ್ಮಿಸಿದ್ದಾರೆ. ಸಿದ್ಧಾರ್ಥ್ ಆನಂದ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ವಾರ್‌’ ನಲ್ಲಿ ವಾಣಿ ಕಪೂರ್‌ ಸಖತ್ ಬೋಲ್ಡ್‌ ಆಗಿ ನಟಿಸಿದ್ದಾರೆ. 

ಈ ಸಲದ ದಸರಾಗೆ ಹೃತಿಕ್‌ ರೋಷನ್‌ ಹಾಗೂ ಟೈಗರ್‌ ಶ್ರಾಫ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯ ಗಿಫ್ಟ್‌ ಕೊಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು