ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಕುಟುಂಬದೊಂದಿಗೆ ರಜೆ ಕಳೆದ ಅಲ್ಲು ಅರ್ಜುನ್

ಸ್ವಿಸ್‌ನಲ್ಲಿ ಫ್ಯಾಮಿಲಿ ಜತೆ ಅಲ್ಲು ಅರ್ಜುನ್

Published:
Updated:
Prajavani

ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ ತಮ್ಮ ನಟನೆ ಮತ್ತು ನೃತ್ಯದ ಮೂಲಕ ಯುವಜನರ ನೆಚ್ಚಿನ ಹೀರೊ. ಅಲ್ಲು ಸಿನಿಮಾಗಳಲ್ಲಿ ಕೌಟುಂಬಿಕ ಮೌಲ್ಯಗಳಿಗೆ  ವಿಶೇಷ ಸ್ಥಾನವಿದೆ. ಅಂತೆಯೇ ಈ ಹೀರೊ ನಿಜ ಜೀವನದಲ್ಲೂ ಕುಟುಂಬಕ್ಕೆ ಆದ್ಯತೆ ನೀಡುವಲ್ಲಿ ಮುಂದಿದ್ದಾರೆ. 

ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಅರ್ಜುನ್ ತುಸು ಬಿಡುವು ಮಾಡಿಕೊಂಡು ಹೆಂಡತಿ ಸ್ನೇಹಾ ರೆಡ್ಡಿ ಮತ್ತು ಮಕ್ಕಳ ಜತೆ ಸ್ವಿಟ್ಜರ್‌ಲೆಂಡ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದಾರೆ. ಅಲ್ಲು ಕುಟುಂಬದ ಜತೆ ಈ ರೀತಿ ಕಾಲ ಕಳೆಯುತ್ತಿರುವುದು ಇದೇ ಮೊದಲಲ್ಲ. ತಮ್ಮ ಕುಟುಂಬದಲ್ಲಿ ಯಾವುದೇ ಮದುವೆಯಿರಲಿ, ಬರ್ತ್‌ಡೇ ಪಾರ್ಟಿಯಿರಲಿ ಅಲ್ಲೆಲ್ಲಾ ಅರ್ಜುನ್ ತಪ್ಪದೇ ಹಾಜರಾತಿ ಇದ್ದೇ ಇರುತ್ತದೆ. 

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರಕ್ಕೆ ಆಯ್ಕೆಯಾಗಿರುವ ಅರ್ಜುನ್ ಚಿತ್ರೀಕರಣ ಪ್ರಾರಂಭಕ್ಕೆ ಮುನ್ನವೇ ಹೆಂಡತಿ, ಮಕ್ಕಳೊಂದಿಗೆ ರಜೆ ಕಳೆದಿದ್ದಾರೆ. ರಜೆಯ ಮಜದಲ್ಲಿ ತೆಗೆದಿರುವ ಚಿತ್ರಗಳನ್ನು ಅಲ್ಲು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

Post Comments (+)