ಭಾನುವಾರ, ಅಕ್ಟೋಬರ್ 25, 2020
23 °C

‘ಆದಿಪುರುಷ್‌’ನ ಸೀತಾ ಪಾತ್ರದಲ್ಲಿ ನಟಿಸುತ್ತಿಲ್ಲ: ಅನುಷ್ಕಾ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ನ ಖ್ಯಾತ ನಟ ಪ್ರಭಾಸ್ ಅಭಿನಯದ ‘ಆದಿಪುರುಷ್’ ಸಿನಿಮಾ ಘೋಷಣೆಯಾದಾಗಿನಿಂದ ಒಂದಲ್ಲ ಒಂದು ಕುತೂಹಲವನ್ನು ಹುಟ್ಟುಹಾಕುತ್ತಿದೆ. ಈ ಸಿನಿಮಾದಲ್ಲಿ ಸೀತಾ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಾರೆ ಎಂಬು ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅನುಷ್ಕಾ ನಾನು ಸೀತಾ ಪಾತ್ರದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.

ಅನುಷ್ಕಾ ಅಭಿನಯದ ‘ನಿಶಬ್ದಂ’ ಚಿತ್ರ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಒಟಿಟಿ ಬಗ್ಗೆ ಅಸಮಾಧಾನ ಹೊಂದಿರುವ ಅನುಷ್ಕಾ ‘ನಿಶಬ್ದಂ’ ಸಿನಿಮಾದ ಪ್ರಚಾರದಲ್ಲೂ ಪಾಲ್ಗೊಂಡಿರಲಿಲ್ಲ.

ಆನ್‌ಲೈನ್ ಕಾನ್ಫರೆನ್ಸ್ ಒಂದರಲ್ಲಿ ಪಾಲ್ಗೊಂಡಿರುವ ಅನುಷ್ಕಾ ತಮ್ಮ ಮುಂದಿನ ಚಿತ್ರ ಬಿಡುಗಡೆ ಹಾಗೂ ಪ್ರಭಾಸ್ ಚಿತ್ರದಲ್ಲಿ ನಟನೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ.

‘ನನ್ನ ಪ್ರಕಾರ ಸಿನಿಮಾಗಳನ್ನು ಮೊದಲ ಬಾರಿ ದೊಡ್ಡ ತೆರೆಯಲ್ಲಿ (ಥಿಯೇಟರ್‌) ನೋಡಬೇಕು. ಅದೇ ಸಿನಿಮಾವನ್ನು ಎರಡನೇ ಬಾರಿ ನೋಡಬೇಕು ಎನ್ನಿಸಿದಾಗ ಮನೆಯಲ್ಲಿ ಕುಳಿತು ನೋಡಬೇಕು. ನೇರವಾಗಿ ಡಿಜಿಟಲ್ ವೇದಿಕೆಯಲ್ಲಿ ನೋಡುವುದರ ಬಗ್ಗೆ ನನಗೆ ಅಷ್ಟೊಂದು ಒಲವಿಲ್ಲ’ ಎಂದಿದ್ದಾರೆ.

ಆದಿಪುರುಷ್ ಚಿತ್ರದ ನಟನೆಯ ಬಗ್ಗೆ ಮಾತನಾಡಿರುವ ಅನುಷ್ಕಾ ‘ನಾನು ಈ ಸಿನಿಮಾದ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ಈ ಮಹಾಕಾವ್ಯದಲ್ಲಿ ಪ್ರಭಾಸ್ ಪಾತ್ರವನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ. ಸಿನಿಮಾದಲ್ಲಿ ನಾನು ನಟಿಸುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದಂತೆ ನಾನು ಈ ಸಿನಿಮಾದಲ್ಲಿ ನಟಿಸುತ್ತೇನೆ ಎಂಬುದೆಲ್ಲಾ ಆಧಾರ ರಹಿತವಾದದ್ದು’ ಎಂದು ಸ್ಪಷ್ಟನೆ ನೀಡಿದ್ದಾರೆ.

ಮದುವೆಯ ವಿಷಯವನ್ನು ತಳ್ಳಿ ಹಾಕಿದ್ದ ಈ ಬೆಡಗಿ ಲಾಕ್‌ಡೌನ್‌ ಅವಧಿಯನ್ನು ತುಂಬಾನೇ ಎಂಜಾಯ್ ಮಾಡಿದ್ದೇನೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು