ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

81ನೇ ವಸಂತಕ್ಕೆ ಕಾಲಿಟ್ಟ ನಟ ಅಮಿತಾಬ್ ಬಚ್ಚನ್‌: ಶುಭ ಕೋರಿದ ಅಭಿಮಾನಿಗಳು

Published 11 ಅಕ್ಟೋಬರ್ 2023, 9:47 IST
Last Updated 11 ಅಕ್ಟೋಬರ್ 2023, 9:47 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಬ್ ಬಚ್ಚನ್‌ ಅವರು ಇಂದು (ಬುಧವಾರ) 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಮುಂಬೈನಲ್ಲಿರುವ ಅವರ ನಿವಾಸದ ಬಳಿ ಬಚ್ಚನ್‌ ಅವರ ಅಭಿಮಾನಿಗಳು ಮಂಗಳವಾರ ತಡರಾತ್ರಿ ಜಮಾಯಿಸಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಶುಭಾಶಯ ಕೋರಿದ್ದಕ್ಕೆ ಅಭಿಮಾನಿಗಳಿಗೆ ಅಮಿತಾಬ್ ಧನ್ಯವಾದ ಅರ್ಪಿಸಿದ್ದಾರೆ.

ತಾತಾನ ಹುಟ್ಟುಹಬ್ಬಕ್ಕೆ ಶ್ವೇತಾ ಬಚ್ಚನ್‌ ಅವರ ಮಗಳು ನವ್ಯಾ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಬಾಲಿವುಡ್‌ ನಟ ಅನಿಲ್‌ಕಪೂರ್‌ ಸೇರಿದಂತೆ ಅನೇಕ ನಟ– ನಟಿಯರು ಅಮಿತಾಬ್‌ಗೆ ಶುಭಾಶಯ ತಿಳಿಸಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಲೆಜೆಂಡರಿ ನಟನಿಗೆ ಶುಭಾಶಯದ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಅಮಿತಾಬ್‌ ಸಹ ಅಭಿಮಾನಿಗಳಿಗೆ ಪ್ರತಿಕ್ರಿಯಿಸಿ, ‘ನೀವು ನೀಡುವ ಆಶೀರ್ವಾದಗಳೇ ನನಗೆ ಅದೃಷ್ಟವಿದಂತೆ‘ ಎಂದು ಬರೆದುಕೊಂಡಿದ್ದಾರೆ.

ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD‘ ಸಿನಿಮಾದಲ್ಲಿ ಬಿಗ್‌ ಬಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸಹ ನಟಿಸಿದ್ದಾರೆ. ಹಾಗೆಯೇ ‘ಸೆಕ್ಷನ್‌ 84‘ ಹಾಗೂ ಇನ್ನೂ ಹೆಸರಿಡದ ಚಿತ್ರದಲ್ಲಿ ರಜನಿಕಾಂತ್‌ ಅವರೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT