ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೇಲರ್‌: 'ಅಂಗ್ರೇಜಿ ಮೀಡಿಯಂ'ನಲ್ಲಿ ಇರ್ಫಾನ್‌ ಖಾನ್‌, ಕರೀನಾ ಕಪೂರ್‌

Last Updated 13 ಫೆಬ್ರುವರಿ 2020, 10:03 IST
ಅಕ್ಷರ ಗಾತ್ರ

ಇರ್ಫಾನ್‌ ಖಾನ್‌, ಕರೀನಾ ಕಪೂರ್‌ ಮತ್ತು ರಾದಿಕಾ ಮದನ್‌ ನಟಿಸಿರುವ ಬಹುನಿರೀಕ್ಷಿತ ಬಾಲಿವುಡ್‌ ಸಿನಿಮಾ ‘ಅಂಗ್ರೇಜಿ ಮೀಡಿಯಂ’ ಟ್ರೇಲರ್‌ ಬಿಡುಗಡೆಯಾಗಿದೆ. ಎರಡು ನಿಮಿಷ ಐವತ್ತೈದು ಸೆಕೆಂಡ್‌ ಅವಧಿಯ ಟ್ರೇಲರ್‌ ಅನ್ನು ಎರಡೂವರೆ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ್ದಾರೆ.

ಆರ್‌ಟಿಇ ಅಡಿ ಪ್ರತಿಷ್ಠಿತ ಶಾಲೆಗಳಲ್ಲಿ ಸೀಟು ಪಡೆಯುವ ಮಕ್ಕಳ ಪೋಷಕರು ಪಡುವ ಪಡಿಪಾಟಲುಗಳ ‘ಹಿಂದಿ ಮೀಡಿಯಂ’ ಹಿಟ್‌ ಆಗಿತ್ತು. ಆ ಸಿನಿಮಾದಲ್ಲಿ ಇರ್ಫಾನ್ ಖಾನ್ ಮತ್ತು ಸಭಾ ಖಾಮರ್ ಪ್ರೇಕ್ಷಕರ ಮನಗೆದ್ದಿದ್ದರು. ಈ ಸಿನಿಮಾದ ಯಶಸ್ಸಿನಿಂದ ಪ್ರೇರಿತರಾಗಿ ‘ಅಗ್ರೇಜಿ ಮೀಡಿಯಂ’ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಈ ಚಿತ್ರದಲ್ಲೂ ಪ್ರಧಾನ ಪಾತ್ರದಲ್ಲಿ ಇರ್ಫಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ, ಇರ್ಫಾನ್ ಪತ್ನಿಯಾಗಿ ರಾಧಿಕಾ ಮದನ್ ಅಭಿನಯಿ ಸುತ್ತಿದ್ದಾರೆ. ಕರೀನಾ ಕಪೂರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ವಿಶೇಷ. ಇದೇ ಮೊದಲ ಬಾರಿಗೆ ಕಾಪ್‌ ಪಾತ್ರದಲ್ಲಿ ಕರೀನಾ ಕಾಣಿಸಿಕೊಳ್ಳುತ್ತಿದ್ದಾರೆ. ಹೋಮಿ ಅದಾಜಾನಿಯಾ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ತಂದೆ, ತನ್ನ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸಲುವಾಗಿ ನಡೆಸುವ ಹೋರಾಟದ ಪಯಣವೇ ಈ ಸಿನಿಮಾದ ಕಥಾ ವಸ್ತು. ಈ ಕಥೆಯನ್ನು ನಿರೂಪಿಸುತ್ತಲೇ ಅಪ್ಪ ಮಗಳ ನಡುವಿನ ಬಾಂಧವ್ಯವನ್ನು ಹೃದಯಸ್ಪರ್ಶಿಯಾಗಿ ತೋರಿಸಲಾಗಿದೆಯಂತೆ.

ಟ್ರೇಲರ್‌ಗೆ ಫಿದಾ ಅಗಿರುವ ನೆಟ್ಟಿಗರು ಫೇಸ್‌ಬುಕ್‌, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.’ಹಿಂದಿ ಮೀಡಿಯಂ’ ಸಿನಿಮಾ ಚೆನ್ನಾಗಿತ್ತು. ಹೀಗಾಗಿ, ಈ ಸಿನಿಮಾ ಬಗ್ಗೆಯೂ ತುಂಬಾ ನಿರೀಕ್ಷೆ ಇದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. ಕೆಲವರು ಟ್ರೇಲರ್‌ನಲ್ಲಿ ಇರ್ಫಾನ್‌ ಖಾನ್‌ ಮತ್ತು ರಾಧಿಕಾ ಮೆನನ್ ನಟನೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ನಟಿಸಿರುವ ಕರೀನಾ ಬಗ್ಗೆಯೂ ಅಭಿಮಾನ ವ್ಯಕ್ತಪಡಿಸಿದ್ದಾರೆ. ಹೃದಯಕ್ಕೆ ತಟ್ಟುವಂತಹ ಸಿನಿಮಾ ನೀಡಿರುವ ಚಿತ್ರತಂಡದ ಪ್ರಯತ್ನವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಈ ಸಿನಿಮಾ ಮಾರ್ಚ್‌ 20ರಂದು ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT