ಸೋನಮ್ ಕಪೂರ್ ಬರ್ತ್ಡೇ: ಪ್ರೀತಿಯ ಮಗಳಿಗೆ ಅನಿಲ್ ಕಪೂರ್ ಹಾರೈಕೆ

ಬೆಂಗಳೂರು: ಬಾಲಿವುಡ್ನ ಪ್ರಮುಖ ತಾರಾ ಕುಟುಂಬದ ಮಗಳು ಸೋನಮ್ ಕಪೂರ್ ಜೂನ್ 9ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ನಟ ಅನಿಲ್ ಕಪೂರ್ ಮಗಳ ಜನ್ಮದಿನದ ಸಂದರ್ಭದಲ್ಲಿ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಶುಭಕೋರುವ ಜತೆಗೆ ಚಿಕ್ಕಂದಿನಲ್ಲಿ ಸೋನಮ್ ಹುಟ್ಟುಹಬ್ಬ ಆಚರಿಸಿಕೊಂಡ ಕ್ಷಣಗಳ ಫೋಟೊವನ್ನು ಹಂಚಿಕೊಂಡಿದ್ದಾರೆ.
ಸೋನಮ್ ಕಪೂರ್ ಬರ್ತ್ಡೇ ಕುರಿತು ಪೋಸ್ಟ್ ಜತೆಗೆ, ತನ್ನ ಹೃದಯವನ್ನು ಹಿಂಬಾಲಿಸುವ ಮತ್ತು ಕನಸುಗಳನ್ನು ಬೆನ್ನತ್ತುವ ಹುಡುಗಿ ನೀನು.. ಪಾಲಕರಾಗಿ ನಮಗೆ ನಿನ್ನ ಬೆಳವಣಿಗೆ ನೋಡಿ ಹೆಮ್ಮೆಯಿದೆ. ಒಳ್ಳೆಯದಾಗಲಿ ಎಂದು ಪ್ರೀತಿಯಿಂದ ಹಾರೈಸಿದ್ದಾರೆ.
ಪ್ರತಿ ವರ್ಷವೂ ಸೋನಮ್, ಕುಟುಂಬದ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಸೋನಮ್ ಪತಿ ಆನಂದ್ ಜತೆಗೆ ಲಂಡನ್ನಲ್ಲಿದ್ದು, ಭಾರತಕ್ಕೆ ಬರಲು ಸಾಧ್ಯವಾಗಿಲ್ಲ.
ಶಿಲ್ಪಾ ಶೆಟ್ಟಿಗೆ ಜನ್ಮದಿನದ ಸಂಭ್ರಮ: ರಾಜ್ ಕುಂದ್ರಾ ಶುಭಾಶಯ ಕೋರಿದ ಪರಿ ಇದು...
ತಂದೆ ಮಾಡಿರುವ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಸೋನಮ್, ಲವ್ ಯೂ ಸೋ ಮಚ್ ಡ್ಯಾಡಿ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.