ಗುರುವಾರ , ಅಕ್ಟೋಬರ್ 29, 2020
28 °C

ಸಿಲ್ಕ್ ಸ್ಮಿತಾ ಜೀವನಚರಿತ್ರೆ ಮೇಲೆ ಇನ್ನೊಂದು ಸಿನಿಮಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿನಿಮಾರಂಗದಲ್ಲಿ ಹೆಸರು ಗಳಿಸಬೇಕು ಎಂದು ಬಂದು ಹೇಳಿಕೊಳ್ಳಲಾಗದ ಸಮಸ್ಯೆಗಳು ಹಾಗೂ ನಿಭಾಯಿಸಲಾಗದ ತೊಂದರೆಗಳಿಂದ ಜೀವನಕ್ಕೆ ಅಂತ್ಯ ಹಾಡಿದ ನಟಿಯರಲ್ಲಿ ಸಿಲ್ಕ್ ಸ್ಮಿತಾ ಕೂಡ ಇಬ್ಬರು. ಇಲ್ಲಿಯವರೆಗೂ ಆಕೆಯ ಸಾವಿನ ಕಾರಣ ರಹಸ್ಯವಾಗಿಯೇ ಇದೆ.

ತಮಿಳಿನ ‘ವಂಡಿ ಚಕ್ರಂ’ ಸಿನಿಮಾದಲ್ಲಿ ಬಾರ್ ಗರ್ಲ್‌ ಪಾತ್ರದಲ್ಲಿ ನಟಿಸಿದ್ದ ಸಿಲ್ಕ್ ಸ್ಮಿತಾ ಈ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದರು.

ಸಿಲ್ಕ್ ಸ್ಮಿತಾ ಎಷ್ಟು ಖ್ಯಾತಿ ಗಳಿಸಿದ್ದರು ಎಂದರೆ ಪ್ರತಿಯೊಬ್ಬ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಆಕೆ ಅತಿಥಿ ಪಾತ್ರ ಅಥವಾ ಐಟಂ ಹಾಡಿನಲ್ಲಿ ನಟಿಸಬೇಕು ಎಂದು ಬಯಸುತ್ತಿದ್ದರು.

ಆ ಕಾಲದಲ್ಲಿ ತಮ್ಮ ಸಿನಿಮಾ ಯಶಸ್ಸು ಕಾಣಬೇಕು ಎಂದರೆ ಸ್ಮಿತಾ ನಟಿಸಬೇಕು ಎಂಬ ಭಾವನೆ ನಿರ್ಮಾಪಕರಲ್ಲಿತ್ತು. ಆಕೆಯನ್ನು ನೋಡುವ ಸಲುವಾಗಿ ಸಿನಿಮಾ ಮಂದಿರಕ್ಕೆ ಜನ ಬರುತ್ತಿದ್ದರು.

ಈ ನಟಿಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಾಪಕಿ ಏಕ್ತಾ ಕಪೂರ್‌ ‘ಡರ್ಟಿ ಪಿಕ್ಚರ್’ ಸಿನಿಮಾ ಮಾಡಿದ್ದರು. ಈ ಸಿನಿಮಾವೂ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಆಗಿತ್ತು.

ಈಗ ಮತ್ತೊಬ್ಬ ನಿರ್ದೇಶಕ ಕೆ. ಎಸ್‌. ಮಣಿಕಂದನ್‌ ಸಿಲ್ಕ್ ಸ್ಮಿತಾ ಜೀವನಚರಿತ್ರೆಯನ್ನು ತೆರೆ ಮೇಲೆ ತರಲು ಮುಂದಾಗಿದ್ದಾರೆ. ಆ ಸಿನಿಮಾಕ್ಕೆ ತಾತ್ಕಾಲಿಕವಾಗಿ ‘ಅವಳ್‌ ಅಪ್ಪಾಡಿದಾನ್‌’ ಎಂದು ಹೆಸರಿಸಲಾಗಿದೆ. ‘ಸಿಲ್ಕ್ ಸಿತ್ಮಾರಿಗೆ ಬೇರೆ ಯಾರೂ ಸಾಟಿಯಿಲ್ಲ. ಅವರ ಜೀವನಚರಿತ್ರೆಯಲ್ಲಿ ಅವರ ಪಾತ್ರದಲ್ಲಿ ನಟಿಸಲು ಸೂಕ್ತವಾಗುವ ನಟಿಯ ಹುಡುಕಾಟದಲ್ಲಿದ್ದೇವೆ’ ಎಂದಿದ್ದಾರೆ ಮಣಿಕಂದನ್‌.

ಸಿಲ್ಕ್ ಸಿತ್ಮಾ ಅಭಿಮಾನಿಗಳು ಈಗಲೂ ಅವರನ್ನು ನೆನೆಸಿಕೊಳ್ಳುತ್ತಾರೆ. ಅವರ ಕುರಿತು ಸಿನಿಮಾವನ್ನು ನೋಡಲು ಕುತೂಹಲ ವ್ಯಕ್ತಪಡಿಸುತ್ತಾರೆ ಎಂಬುದು ಸುಳ್ಳಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು