ವಿವಾದಕ್ಕೀಡಾಗಿರುವ ‘ದಿ ಕೇರಳ ಸ್ಟೋರಿ 2 ಗೋಸ್ ಬಿಯಾಂಡ್’ ಸಿನಿಮಾ ‘ಜನರನ್ನು ವಿಭಜಿಸಿ ಅವರಲ್ಲಿ ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿರುವ ಚಿತ್ರವಾಗಿದೆ’ ಎಂದು ಬಾಲಿವುಡ್ನ ಖ್ಯಾತ ನಿರ್ಮಾಪಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.

2023ರಲ್ಲಿ ಸಿನಿಮಾದ ಮೊದಲ ಭಾಗ ‘ದಿ ಕೇರಳ ಸ್ಟೋರಿ’ ಬಿಡುಗಡೆಯಾಗಿತ್ತು. ಚಿತ್ರದ ಮುಂದಿನ ಭಾಗವಾದ ದಿ ಬಿಯಾಂಡ್ ದಿ ಕೇರಳ ಸ್ಟೋರಿ ಚಿತ್ರವನ್ನು ಕಮಖ್ಯ ನಾರಾಯಣ ಸಿಂಗ್ ನಿರ್ದೇಶಿಸಿದ್ದಾರೆ. ವಿಪುಲ್ ಅಮೃತ್ಲಾಲ್ ಹಾಗೂ ಸನ್ಶೈನ್ ಪಿಕ್ಚರ್ಸ್ ನಿರ್ಮಾಣವಿದೆ. ಸಿನಿಮಾವು ಇದೇ ಫೆಬ್ರುವರಿ 27ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಚಿತ್ರತಂಡ ತಿಳಿಸಿದೆ.
.‘ದಿ ಕೇರಳ ಸ್ಟೋರಿ–2’ ಸಿನಿಮಾ ನಿರ್ದೇಶಕರಿಗೆ ಹೈಕೋರ್ಟ್ ನೋಟಿಸ್.‘ದಿ ಕೇರಳ ಸ್ಟೋರಿ 2’ ದ್ವೇಷ ಹುಟ್ಟಿಸುವ ಚಿತ್ರ: ಕೇರಳ ಸಿಎಂ ಪಿಣರಾಯಿ ಆರೋಪ.
70 ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಚ್ಚಿಗೆ ಬಂದಿದ್ದ ಕಶ್ಯಪ್ ಅವರಿಗೆ ದಿ ಕೇರಳ ಸ್ಟೋರಿ 2 ಗೋಸ್ ಬಿಯಾಂಡ್ ಚಿತ್ರದ ಬಗ್ಗೆ ಅಭಿಪ್ರಾಯವನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಇದೊಂದು ಪ್ರಚಾರದ ಚಿತ್ರವಾಗಿದೆ. ಈ ಸಿನಿಮಾ ಜನರನ್ನು ವಿಭಜಿಸಿ ಅವರಲ್ಲಿ ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿದೆ. ತಯಾರಕರು ದುರಾಸೆಯುಳ್ಳವರು’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ದಿ ಕೇರಳ ಸ್ಟೋರಿ 2 ಚಿತ್ರಕ್ಕೆ ನೀಡಿರುವ ಪ್ರಮಾಣೀಕರಣವನ್ನು ರದ್ದುಗೊಳಿಸಬೇಕು ಹಾಗೂ ಸಿನಿಮಾದ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಕೆಲವು ಬದಲಾವಣೆಗಳನ್ನು ಮಾಡುವ ಕುರಿತು ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಕೇರಳ ಹೈಕೋರ್ಟ್ಗೆ ಅರ್ಜಿಸಲ್ಲಿಸಲಾಗಿತ್ತು. ಸದ್ಯ ವಿಚಾರಣೆಯನ್ನು ಫೆಬ್ರುವರಿ 24ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.