ಬುಧವಾರ, ಮೇ 25, 2022
27 °C

ವಿರುಷ್ಕಾ ದಾಂಪತ್ಯಕ್ಕೆ 4 ವರ್ಷ: ಆತ್ಮಸಂಗಾತಿಯ ಕುರಿತು ಅನುಷ್ಕಾ ಬರೆದಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ದಾಂಪತ್ಯ ಜೀವನಕ್ಕೆ ನಾಲ್ಕು ವರ್ಷಗಳು ಸಂದಿವೆ.

ಅನುಷ್ಕಾ ಮತ್ತು ವಿರಾಟ್ ಡಿಸೆಂಬರ್ 2017 ರಲ್ಲಿ ಇಟಲಿಯ ಲೇಕ್ ಕೊಮೊ ತೀರದಲ್ಲಿ ವಿವಾಹವಾಗಿದ್ದರು. 

ಮದುವೆ ವಾರ್ಷಿಕೋತ್ಸವದ ಸಂಭ್ರದಲ್ಲಿರುವ ಅನುಷ್ಕಾ ಅವರು ವಿರಾಟ್‌ರೊಂದಿಗೆ ವಿನೋದದಿಂದ ಸಮಯ ಕಳೆಯುತ್ತಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

ಫೋಟೊಗಳೊಂದಿಗೆ ವಿರಾಟ್‌ರನ್ನು ಹೊಗಳಿ ಟಿಪ್ಪಣಿಯೊಂದನ್ನು ಅನುಷ್ಕಾ ಹಂಚಿಕೊಂಡಿದ್ದಾರೆ. 

‘ಸುಲಭವಾದ ದಾರಿಯೆಂಬುದಿಲ್ಲ. ಇವು ನೀನು(ವಿರಾಟ್‌) ನಂಬಿರುವ ಪದಗಳು. ಸಂಬಂಧಗಳು ಸೇರಿದಂತೆ ಎಲ್ಲದಕ್ಕೂ ಈ ಪದಗಳು ಅನ್ವಯವಾಗುತ್ತವೆ. ಗ್ರಹಿಕೆಗಳೇ ತುಂಬಿದ ಜಗತ್ತಿನಲ್ಲಿ ನಿನ್ನ ಹಾಗೇ ಬದುಕಲು ಪ್ರಚಂಡ ಧೈರ್ಯ ಬೇಕು. ನನಗೆ ಅಗತ್ಯವಿರುವಾಗ ಸ್ಫೂರ್ತಿ ನೀಡಿದ್ದಕ್ಕಾಗಿ ಮತ್ತು ಆಲಿಸಬೇಕಿರುವ ಸಂದರ್ಭದಲ್ಲಿ ನಿನ್ನ ಮನಸ್ಸನ್ನು ತೆರೆದಿಟ್ಟುಕೊಂಡಿದ್ದಕ್ಕಾಗಿ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

‘ಇಬ್ಬರೂ ಸುರಕ್ಷಿತವಾಗಿದ್ದಾಗ ಮಾತ್ರ ಸಮಾನ ಮನಸ್ಕರ ನಡುವೆ ಮದುವೆ ಸಾಧ್ಯ. ನೀನು ನನಗೆ ತಿಳಿದಿರುವ ಅತ್ಯಂತ ಸುರಕ್ಷಿತ ವ್ಯಕ್ತಿ. ನಾನು ಮೊದಲೇ ಹೇಳಿದಂತೆ, ನಿಜವಾಗಿ ನಿನ್ನನ್ನು ತಿಳಿದಿರುವವರು ಅದೃಷ್ಟವಂತರು. ಪ್ರೀತಿ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಗೌರವವು ನಮಗೆ ಯಾವಾಗಲೂ ಮಾರ್ಗದರ್ಶನ ನೀಡಲಿ’ ಎಂದು ನಟಿ ಅನುಷ್ಕಾ ಬರೆದುಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು