ನವದೆಹಲಿ: ರಾಜ್ಕುಮಾರ್ ಹಿರಾನಿಯ 2009 ರ ಹಿಟ್ ಚಿತ್ರ 3 ಈಡಿಯಟ್ಸ್ಗೆ ಅನುಷ್ಕಾ ಶರ್ಮಾ ಆಡಿಷನ್ ಮಾಡಿರುವುದು ನಿಮಗೆ ತಿಳಿದಿದೆಯೇ? ಹೌದು, ಇದು ಸತ್ಯ. ಅನುಷ್ಕಾ ಶರ್ಮಾ ಅವರ ಹಳೆಯ ಆಡಿಶನ್ ವಿಡಿಯೊವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕ್ಲಿಪ್ನಲ್ಲಿ, ಸಂಜಯ್ ದತ್ ಅವರ ಮುನ್ನಾಭಾಯ್ ಎಂಬಿಬಿಎಸ್ ಚಿತ್ರದಲ್ಲಿ ಗ್ರೇಸಿ ಸಿಂಗ್ ಅವರ ಡೈಲಾಗ್ ಅನ್ನು ಅನುಷ್ಕಾ ಬಳಸಿದ್ದು, ಗ್ರೀನ್ ಟಾಪ್ ಧರಿಸಿದ್ದಾರೆ. ಆದರೆ, 3 ಈಡಿಯಟ್ಸ್ ಚಿತ್ರಕ್ಕೆ ಅನುಷ್ಕಾ ಆಯ್ಕೆಯಾಗಿರಲಿಲ್ಲ. ಅಮೀರ್ ಖಾನ್, ಆರ್ ಮಾಧವನ್, ಶರ್ಮನ್ ಜೋಶಿ, ಕರೀನಾ ಕಪೂರ್ ಮತ್ತು ಬೊಮನ್ ಇರಾನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಅನುಷ್ಕಾ ಶರ್ಮಾ ಅವರ ಹಲವು ಫ್ಯಾನ್ಸ್ಕ್ಲಬ್ಗಳು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿವೆ.

ಚೇತನ್ ಭಗತ್ ಅವರ ಕಾದಂಬರಿ ಆಧರಿಸಿದ 3 ಈಡಿಯಟ್ಸ್ನಲ್ಲಿ ಅನುಷ್ಕಾ ಶರ್ಮಾ ಅವರಿಗೆ ರಾಜ್ ಕುಮಾರ್ ಹಿರಾನಿ ಮತ್ತು ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ, 5 ವರ್ಷಗಳ ನಂತರ, 2014 ರ ಬ್ಲಾಕ್ ಬಸ್ಟರ್ ಪಿಕೆ ಚಿತ್ರದಲ್ಲಿ ಕಾಣಿಸಿಕೊಂಡರು. ಮುನ್ನಾಭಾಯ್ ಎಂಬಿಬಿಎಸ್, 3 ಈಡಿಯಟ್ಸ್ ಮತ್ತು ಪಿಕೆ ಮೂರೂ ಚಲನಚಿತ್ರಗಳನ್ನು ವಿಧು ವಿನೋದ್ ಚೋಪ್ರಾ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.