ಸೋಮವಾರ, ಮೇ 16, 2022
22 °C

ಟಿಕ್‌ಟಾಕ್‌ ಸ್ಟಾರ್‌ ‘ಹಾಫ್’ ಹೀರೋಯಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಲಾಲ್‌ಜೋಸ್‌’ ಹೆಸರಿನ ಮಲಯಾಳಂ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ್ದ ಟಿಕ್‌ಟಾಕ್‌ ಸ್ಟಾರ್‌ ಅಥಿರಾ, ಇದೀಗ ಚಂದನವನಕ್ಕೆ ಕಾಲಿರಿಸಿದ್ದಾರೆ.

ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ ಎರಡನೇ ಚಿತ್ರ ‘ಹಾಫ್’ಗೆ ನಾಯಕಿಯಾಗಿ ಅಥಿರಾ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅಥಿರಾ, ಪ್ರಸ್ತುತ ದ್ವಿತೀಯ ಪಿಯು ಅಧ್ಯಯನ ನಡೆಸುತ್ತಿದ್ದಾರೆ. ಟಿಕ್‌ಟಾಕ್‌ನಲ್ಲಿ ಒಟ್ಟು 8 ಲಕ್ಷ ಹಿಂಬಾಲಕರನ್ನು ಇವರು ಹೊಂದಿದ್ದಾರೆ. ʻಹಾಫ್ ಸಿನಿಮಾ ನನ್ನ ಪಾಲಿಗೆ ದೊರಕಿರುವುದು ಅದೃಷ್ಟ ಅಂದುಕೊಂಡಿದ್ದೇನೆ. ಈ ಚಿತ್ರದಲ್ಲಿ ಅದ್ಭುತವಾದ ಪಾತ್ರ ನನ್ನದು. ಸಿನಿಮಾ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ನನಗೆ ಯಾವ ತಕರಾರೂ ಇಲ್ಲʼ ಎನ್ನುತ್ತಾರೆ ಅಥಿರಾ.

‘ನಮ್ಮ ಸಿನಿಮಾಗೆ ಶಾಲಾ ವಿದ್ಯಾರ್ಥಿನಿ ಪಾತ್ರಕ್ಕೆ ನಟಿ ಬೇಕಿತ್ತು. ಅಥಿರಾ ನಟನಾ ಕೌಶಲ್ಯವನ್ನು ಗುರುತಿಸಿ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರೀಕರಣಗೊಂಡಿರುವ ದೃಶ್ಯಗಳನ್ನು ನೋಡುತ್ತಿದ್ದರೆ, ನಿಜಕ್ಕೂ ಈಕೆ ಉತ್ತಮ ಕಲಾವಿದೆಯಾಗಿ ಹೊರಹೊಮ್ಮುತ್ತಾರೆ ಎನ್ನುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ’ ಎನ್ನುತ್ತಾರೆ ಲೋಕೇಂದ್ರ ಸೂರ್ಯ.

ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದೇ ಖ್ಯಾತರಾಗಿರುವ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು