ಮಂಗಳವಾರ, ಡಿಸೆಂಬರ್ 7, 2021
20 °C

ಶಾಸಕ ಜಮೀರ್‌ ಪುತ್ರನ ಮೊದಲ ಸಿನಿಮಾದ ಆಡಿಯೊ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಹರಿ ಮತ್ತು ಟಿ–ಸೀರಿಸ್ ಆಡಿಯೊ ಸಂಸ್ಥೆಯು ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್‌ನ ‘ಬನಾರಸ್’ ಚಿತ್ರದ ಆಡಿಯೊ ಹಕ್ಕುಗಳನ್ನು ಮೂರೂವರೆ ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ.

ಶಾಸಕ ಜಮೀರ್‌ ಅಹಮ್ಮದ್‌ ಪುತ್ರ, ಝೈದ್‌ ಖಾನ್‌ ನಾಯಕನಾಗಿ ನಟಿಸಿರುವ ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣುತ್ತಿದ್ದು, ಜಯತೀರ್ಥ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಝೈದ್‌ ಖಾನ್‌ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸುತ್ತಿದ್ದು, ಸೋನಲ್ ಮೊಂಟೆರೋ ಜೋಡಿಯಾಗಿ ಹೆಜ್ಜೆಹಾಕಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದು, ಐದು ಹಾಡುಗಳನ್ನು ಇದು ಒಳಗೊಂಡಿದೆ. 

‘ಈ ಸಿನಿಮಾದ ಚಿತ್ರೀಕರಣದ ಶೇ.90 ಭಾಗ ಈಗಾಗಲೇ ಬನಾರಸ್‌ನಲ್ಲಿ ಚಿತ್ರೀಕರಿಸಿದ್ದು, ಅಲ್ಲಿನ ಎಲ್ಲಾ 84 ಘಾಟ್‌ಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದೇವೆ’ ಎಂದಿದೆ ಚಿತ್ರತಂಡ. ಚೊಚ್ಚಲ ನಾಯಕ‌ ನಟರೊಬ್ಬರ ಸಿನಿಮಾಗಳ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಲಹರಿ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾಗಿ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು