ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿರುವ ‘ಬಾರಾಮುಲ್ಲ’ ಸಿನಿಮಾ ಒಂದು ಅದ್ಭುತ ನೈಜ ಥ್ರಿಲ್ಲರ್ ಕಥೆಯಾಗಿದೆ. ನೆಟ್ಫ್ಲಿಕ್ಸ್ನ 16 ದೇಶಗಳ ಜಾಗತಿಕ ಶ್ರೇಯಾಂಕದಲ್ಲಿ ಬಾರಾಮುಲ್ಲ ಸಿನಿಮಾ ಟಾಪ್ 10ರೊಳಗೆ ಸ್ಥಾನ ಪಡೆದ ಏಕೈಕ ಇಂಗ್ಲಿಷ್ಯೇತರ ಸಿನಿಮಾವಾಗಿದೆ.

ಮಾನವ್ ಕೌಲ್ ಮತ್ತು ಭಾಷಾ ಸುಂಬ್ಲಿ ನಟನೆಯ ಹಾರರ್ ಥ್ರಿಲ್ಲರ್ ಸಿನಿಮಾವನ್ನು ನೀವು ವೀಕ್ಷಿಸಲು ಇರುವ ಐದು ಪ್ರಮುಖ ಕಾರಣಗಳೇನು ಎಂಬುದನ್ನು ಇಲ್ಲಿ ನೋಡೋಣ.

ಸೂಪರ್ ನ್ಯಾಚುರಲ್ ಹಾರರ್ ಸಿನಿಮಾ

ಬಾರಾಮುಲ್ಲ ಸಿನಿಮಾ ಇತರೆ ಹಾರರ್ ಥ್ರಿಲ್ಲರ್ ಸಿನಿಮಾಗಳಿಗಿಂತ ಬಹಳ ಭಿನ್ನವಾಗಿದ್ದಾಗಿದೆ. ಸೂಕ್ಷ್ಮ ಮತ್ತು ಆತಂಕಕಾರಿ ವಾತಾವರಣದ ಸಿನಿಮಾವಾಗಿದೆ. ಸಿನಿಮಾದಲ್ಲಿ ನಿಶ್ಯಬ್ಧತೆಯನ್ನು ಕೂಡ ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದರಿಂದ ನೋಡುಗರ ಕುತೂಹಲ ಹೆಚ್ಚಿಸುತ್ತದೆ.

ನೆಟ್ಫ್ಲಿಕ್ಸ್ನ ಅತ್ಯಂತ ನೈಜ ಥ್ರಿಲ್ಲರ್ ಸಿನಿಮಾ

ರೋಮಾಂಚಕಾರಿ ಸಿನಿಮಾಗಳನ್ನು ಬಿಡುಗಡೆ ಮಾಡುವಲ್ಲಿ ಹೆಸರುವಾಸಿಯಾಗಿರುವ ನೆಟ್ಫ್ಲಿಕ್ಸ್ ಇಂಡಿಯಾ, ಬಾರಾಮುಲ್ಲಾದ ಮೂಲಕ ಹಾರರ್ ಥ್ರಿಲ್ಲರ್ ಸಿನಿಮಾಗಳನ್ನು ಬಿಡುಗಡೆ ಮಾಡಲು ಹೊಸ ಹೆಜ್ಜೆ ಇಟ್ಟಿದೆ. ಅನಿರೀಕ್ಷಿತತೆ, ಸ್ಥಳೀಯ ವಾತಾವರಣ ಮತ್ತು ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಈ ಚಿತ್ರವು ಭಾರತೀಯ ಸಿನಿಮಾಗೆ ಹೊಸ ಮಾನದಂಡ ನೀಡಿದೆ.

ವಾಸ್ತವ ಮತ್ತು ಭಾವನೆಗಳನ್ನು ಹೇಳುವ ಕಥಾ ಹಂದರ

ಬಾರಾಮುಲ್ಲಾ ಕೇವಲ ಒಂದು ನಿಗೂಢ ಕಥೆಯಲ್ಲ. ಇದು ಭಾವನೆಗಳು ಮತ್ತು ಅತೀಂದ್ರಿಯ ಶಕ್ತಿಗಳನ್ನು ಜೋಡಿಸಿ ಹೆಣೆದಿರುವ ಆಳವಾದ ಸಮ್ಮಿಲನವಾಗಿದೆ. ಈ ಸಿನಿಮಾ ನಿಮ್ಮ ಕುತೂಹಲವನ್ನು ಕೊನೆ ಕ್ಷಣದವರೆಗೂ ಹಿಡಿದಿಡುವಲ್ಲಿ ಯಶಸ್ವಿಯಾಗಲಿದೆ.

ಬಾರಾಮುಲ್ಲಗೆ ಜೀವ ತುಂಬಿದ ಚಲನಚಿತ್ರ ನಿರ್ಮಾಪಕರು

ಆರ್ಟಿಕಲ್ 370 ಖ್ಯಾತಿಯ ಆದಿತ್ಯ ಜಂಬಾಳೆ ನಿರ್ದೇಶಿಸಿರುವ ಬಾರಾಮುಲ್ಲ, ಧೂಮ್ ಧಾಮ್ ಬಳಿಕ ನೆಟ್ಫ್ಲಿಕ್ಸ್ಲ್ಲಿ ಬಿಡುಗಡೆಯಾದ ಅವರ ಎರಡನೇ ಸಿನಿಮಾವಾಗಿದೆ. ಮಾನವ ಕೌಲ್ ನಟನೆಯ ಬಾರಾಮುಲ್ಲಾ ಚಿತ್ರವು ನವೆಂಬರ್ 7ರಂದು ನೆಟ್ಫಿಕ್ಸ್ನಲ್ಲಿ ಬಿಡುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.