ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಗೂ ಮುನ್ನ ಬಾಲಕೃಷ್ಣರವರ ಸಿನಿಮಾ 'ವೀರಸಿಂಹ ರೆಡ್ಡಿ' ಸಂಭ್ರಮ

Last Updated 12 ಜನವರಿ 2023, 11:07 IST
ಅಕ್ಷರ ಗಾತ್ರ

ಹೈದರಾಬಾದ್: ಟಾಲಿವುಡ್‌ನ ಮಾಸ್ ಹೀರೋ ನಂದಮೂರಿ ಬಾಲಕೃಷ್ಣ ಅವರ ಬಹು ನಿರೀಕ್ಷಿತ ಚಿತ್ರ 'ವೀರ ಸಿಂಹ ರೆಡ್ಡಿ' ಇಂದು ಬಿಡುಗಡೆಯಾಗಿದೆ.

ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯ ಸಮಯದಲ್ಲಿ ಸಿನಿಮಾ ಬಿಡಿಗಡೆಯಾಗಿರುವುದು ಅವರ ಅಭಿಮಾನಿಗಳಿಗೆ ಹೆಚ್ಚು ಸಂಭ್ರಮವಾಗಿದೆ. ತೆಲುಗು ಚಿತ್ರರಂಗದಲ್ಲಿ ನಂದಮೂರಿ ಬಾಲಕೃಷ್ಣ ಬಹು ಜನಪ್ರಿಯ ನಟರಾಗಿರುವುದರಿಂದ ಸಿನಿ ರಸಿಕರು ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ.

ಕುಕಟ್‌ಪಲ್ಲಿ ಪ್ರದೇಶದ ಭ್ರಮರಂಭಾ ಥಿಯೇಟರ್‌ಗೆ ಸಿನಿಮಾ ವಿಕ್ಷೀಸಲು, ಬಾಲಕೃಷ್ಟ ಅವರೊಂದಿಗೆ ಆಗಮಿಸಿದ ಅಭಿಮಾನಿಗಳು ‘ಶ್ರೀ ಜೈ ಬಾಲಯ್ಯ’ ಘೋಷಣೆಗಳೊಂದಿಗೆ ಸಂಭ್ರಮಿಸಿದರು. ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಟನ ಅಭಿಮಾನಿಗಳು ಬೃಹತ್ ಕಾರು ರ್ಯಾಲಿ ನಡೆಸಿ ಅಭಿಮಾನವನ್ನು ವ್ಯಕ್ತಪಡಿಸಿದರು.

'ವೀರ ಸಿಂಹ ರೆಡ್ಡಿ' ಸಿನಿಮಾವು ಮಾಸ್ ಮನರಂಜನೆ ಸಿನಿಮಾವಾಗಿದ್ದು, ಭಾವನಾತ್ಮಕತೆ, ಮಾಸ್ ಡೈಲಾಗ್, ಹಾಡುಗಳು, ಡಾನ್ಸ್, ಬಾಲಯ್ಯ ದ್ವಿಪಾತ್ರ ಅಭಿನಯ, ಸಾಹಸಮಯ ದೃಶ್ಯಗಳು ಸಿನಿಮಾದ ಪ್ಲಾಸ್ ಪಾಯಿಂಟ್ ಆಗಲಿವೆ.

ಚಿತ್ರದಲ್ಲಿ ಬಾಲಯ್ಯಗೆ ಜೋಡಿಯಾಗಿ ಶೃತಿ ಹಾಸನ್ ಮೊದಲ ಬಾರಿಗೆ ಜೊತೆಯಾಗಿದ್ದಾರೆ. ಕನ್ನಡದ ದುನಿಯಾ ವಿಜಯ್, ಕಾಲಿವುಡ್‌ನ ವರಲಕ್ಷೀ ಶರತ್ ಕುಮಾರ್ ನಟಿಸಿದ್ದಾರೆ. ರಿಷಿ ಪಂಜಾಬಿ ಅವರ ಛಾಯಾಗ್ರಹಣ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ ಮಾಡಿದ್ದಾರೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ಮತ್ತು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಶುಕ್ರವಾರ ಬಿಡುಗಡೆಯಾಗಲಿರುವ ಮೆಗಾಸ್ಟಾರ್ ಚಿರಂಜೀವಿ ಅವರ 'ವಾಲ್ಟೇರ್ ವೀರಯ್ಯ' ಜೊತೆ 'ವೀರ ಸಿಂಹ ರೆಡ್ಡಿ' ಪೈಪೋಟಿ ನೀಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT