ಮಂಗಳವಾರ, ಜನವರಿ 25, 2022
28 °C

‘ಬೆಂಕಿ’ ಹಚ್ಚಲು ಬರುತ್ತಿದ್ದಾರೆ ಅನೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಅನೀಶ್‌ ತೇಜೇಶ್ವರ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ದಿನವೇ (ಬುಧವಾರ) ಅವರ ನಟನೆ, ನಿರ್ಮಾಣದ ಹೊಸ ಚಿತ್ರ ‘ಬೆಂಕಿ’ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್‌ಲುಕ್‌ ಬಿಡುಗಡೆ ಆಗಿದೆ. ಅಂದಹಾಗೆ ಇದು ಅನೀಶ್‌ ಅವರ 10ನೇ ಚಿತ್ರ. ‘ವಿಂಕ್ ವಿಷಲ್ ಪ್ರೊಡಕ್ಷನ್’ ಲಾಂಛನದ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.  

‘ನಮ್‌ ಏರಿಯಾಲಿ ಒಂದಿನ’, ‘ಪೊಲೀಸ್‌ ಕ್ವಾಟ್ರಸ್‌’, ‘ಅಕಿರ’, ‘ವಾಸು ನನ್ ಪಕ್ಕ ಕಮರ್ಷಿಯಲ್’, ‘ರಾಮಾರ್ಜುನ’ ಚಿತ್ರಗಳಲ್ಲಿ ಅನೀಶ್‌ ನಟಿಸಿ ಕಮನ ಸೆಳೆದಿದ್ದರು. ಈ ಚಿತ್ರದಲ್ಲಿ ಗಡ್ಡ ಮೀಸೆ ಬಿಟ್ಟು ಖಡಕ್ ಲುಕ್ ನಲ್ಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ಸಂಪದ ಈ ಚಿತ್ರದ ನಾಯಕಿ. 

ಹಿರಿಯ ನಿರ್ದೇಶಕ ಎ.ಆರ್‌. ಬಾಬು ಅವರ ಪುತ್ರ, ಶಾನ್‌ ಅವರು ‘ಬೆಂಕಿ’ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಈಗಾಗಲೇ ಶೇ 80ರಷ್ಟು ಚಿತ್ರೀಕರಣ ಮುಗಿದಿದೆ. ಹಾಡು ಮತ್ತು ಮಾತಿನ ಭಾಗಗಳು ಸ್ವಲ್ಪ ಬಾಕಿ ಇವೆ ಎಂದು ಚಿತ್ರ ತಂಡ ಹೇಳಿದೆ.

ಶೃತಿ ಪಾಟೀಲ್, ಅಚ್ಯುತ್‌ ಕುಮಾರ್‌, ಸಂಪತ್‌, ಉಗ್ರಂ ಮಂಜು, ಹರಿಣಿ ತಾರಾಗಣದಲ್ಲಿದ್ದಾರೆ. ಕೌಶಿಕ್‌ ಹರ್ಷ ಸಂಗೀತ ಸಂಯೋಜನೆ, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ ಸಿನಿಮಾದಲ್ಲಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು