ಬುಧವಾರ, ಜನವರಿ 22, 2020
28 °C

ಟೀಸರ್‌ | ರಶ್ಮಿಕಾ ಮಂದಣ್ಣಗಾಗಿ 'ಭೀಷ್ಮ' ಪ್ರತಿಜ್ಞೆ ಮಾಡಿದ ನಿತಿನ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ನಿತಿನ್‌ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ  ‘ಭೀಷ್ಮಾ’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ‘ಭೀಷ್ಮ’ ಟೀಸರ್‌ ಅನ್ನು ಒಂದೇ ದಿನದಲ್ಲಿ ಸುಮಾರು 25 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಇಟಲಿ ಸೇರಿದಂತೆ ವಿದೇಶಗಳ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಈ ಹಿಂದೆ ವಾರ್‌ ಸಿನಿಮಾದಲ್ಲಿನ ಗುಂಗುರು ಹಾಡಿಗೆ ನಿತನ್‌ ಮತ್ತು ರಶ್ಮಿಕಾ ಹೆಜ್ಜೆ ಹಾಕಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಮೂಲ ಹಾಡಿನಲ್ಲಿ ಹೃತಿಕ್‌ ಮತ್ತು ವಾಣಿ ಡ್ಯಾನ್ಸ್‌ ಮಾಡಿದ ರೀತಿಯಲ್ಲೇ ಇವರು ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. 

ಬಿಷ್ಮದ ಮತ್ತೊಂದು ವಿಶೇಷವೆಂದರೆ ನಟ ಅನಂತನಾಗ್‌ ನಟಿಸಿದ್ದಾರೆ. ಕೌಟುಂಬಿಕ ಕಥಾಹಂದರ ಇರುವ ಸಿನಿಮಾ ಕ್ಲಾಸ್‌ ಮತ್ತು ಮಾಸ್‌ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರದಲ್ಲಿ ನಿತಿನ್‌ ಸ್ವಲ್ಪ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ನಿರ್ದೇಶಕ ವೆಂಕಿ ಕುಡುಮುಲ ಹೇಳಿದ್ದಾರೆ.

ಬ್ರಹ್ಮಚಾರಿ ನಿತಿನ್‌ ಭಿಷ್ಮ ಪ್ರತಿಜ್ಞೆ ಮಾಡುವುದು ನಾಯಕಿಗಾಗಿಯೋ ಅಥವಾ ಕುಟುಂಬದ ರಕ್ಷಣೆಗಾಗಿಯೋ ಎಂಬುದುನ್ನು ಬೆಳ್ಳಿ ತೆರೆಯ ಮೇಲೆ ನೋಡಿಯೇ ತಿಳಿಯಬೇಕು.

ಪಿಡಿವಿ ಪ್ರಸಾದ್‌ ಭೀಷ್ಮ ಸಿನಿಮಾವನ್ನು ನಿರ್ಮಾಣಮಾಡುತ್ತಿದ್ದಾರೆ. ವೆಂಕಿ ಕುಡುಮುಲ ನಿರ್ದೇಶನವಿರುವ ಈ ಚಿತ್ರಕ್ಕೆ ಮಹತಿ ಸ್ವರಾ ಸಾಗರ್‌ ಅವರ ಸಂಗೀತ ಸಂಯೋಜನೆ ಇದೆ.  

‘ಭೀಷ್ಮ‘ ಚಿತ್ರ ಫೆ.21 ರಂದು ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು