‘ಕೆಜಿಎಫ್ ಚಾಪ್ಟರ್ 1– 2’ ಹಾಗೂ ‘ಸಲಾರ್ 1 ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ ಭುವನ್ ಗೌಡ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಚಿತ್ರ: ಇನ್‌ಸ್ಟಾಗ್ರಾಮ್
ADVERTISEMENT
ಅಕ್ಟೋಬರ್ 24ರಂದು ಭುವನ್ ಗೌಡ - ನಿಖಿತಾ ಅದ್ಧೂರಿಯಾಗಿ ವಿವಾಹ ಆಗಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಇದೀಗ ಭುವನ್ ಗೌಡ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಈ ಕಾರ್ಯಕ್ರಮಕ್ಕೆ ಚಂದನವನದ ತಾರೆಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ನಿಖಿತಾ ಹಾಗೂ ಭುವನ್ ಗೌಡ ಆರತಕ್ಷತೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ನಿಧಿ ಸುಬ್ಬಯ್ಯ, ಶಾನ್ವಿ ಶ್ರೀವಾಸ್ತವ, ಶ್ರೀಲೀಲಾ, ರಾಗಿಣಿ ದ್ವಿವೇದಿ, ದಿಶಾ ಮದನ್, ಪನ್ನಗಾಭರಣ, ಅಮೃತಾ ಅಯ್ಯಂಗಾರ್, ಹರ್ಷಿಕಾ ಪೂಣಚ್ಚ ದಂಪತಿ ಸೇರಿದಂತೆ ಸಾಕಷ್ಟು ತಾರೆಯರು ಬಂದಿದ್ದರು.
ಚಿತ್ರ: ಇನ್‌ಸ್ಟಾಗ್ರಾಮ್
ಭುವನ್ ಗೌಡ ತಮ್ಮ ಆರತಕ್ಷತೆಯ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಮ್
ಇದೇ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಚಿತ್ರ: ಇನ್‌ಸ್ಟಾಗ್ರಾಮ್
ಈ ನವ ಜೋಡಿ ಬ್ಲಾಕ್ ಟು ಬ್ಲಾಕ್ ಬಟ್ಟೆಯಲ್ಲಿ ಮಿಂಚಿದ್ದಾರೆ.