ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಗ್‌ಬಾಸ್‌ ಖ್ಯಾತಿಯ ದಿವ್ಯಾ–ಅರವಿಂದ್‌ ‘ಅರ್ದಂಬರ್ಧ ಪ್ರೇಮಕಥೆ’

Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕಿರುತೆರೆಯ ‘ಬಿಗ್‌ಬಾಸ್‌’ ಮೂಲಕ ಮನೆಮಾತಾದ ದಿವ್ಯಾ ಉರುಡುಗ ಹಾಗೂ ಅರವಿಂದ್‌ ಕೆ.ಪಿ. ಜೋಡಿ ಇದೀಗ ಸಿನಿಮಾವೊಂದರ ಮೂಲಕ ಬೆಳ್ಳಿತೆರೆಗೆ ಬರುತ್ತಿದೆ. 

ಅರವಿಂದ್‌ ಕೌಶಿಕ್‌ ನಿರ್ದೇಶನದ ‘ಅರ್ದಂಬರ್ಧ ಪ್ರೇಮಕಥೆ’ ಚಿತ್ರದ ಟೀಸರ್‌ ಇಂದು(ಸೆ.15) ಬಿಡುಗಡೆಯಾಗಲಿದೆ. ‘ದಾರಿಹೋಕನೆಂದುಕೊಂಡೆ ದಾರಿಯೇ ಇವನಾದಂತಿದೆ ಗುಟ್ಟೊಂದು ಗುಯ್ಗುಟ್ಟಿ ದಾರಿ ತಪ್ಪಿದ ಹಾಗಿದೆ! ಪ್ರೇಮಕಥೆಯಲ್ಲಿ ಬಂದೂಕು ಏಕೆ? ತಿರುವುಗಳ ರಸ್ತೆಯಿದು.. ಸುಳಿವಿಲ್ಲವೇಕೆ?’ ಎನ್ನುವ ಮೂಲಕ ನಾಯಕ ಅರವಿಂದ್‌ ಕಥಾಹಂದರದ ಸುಳಿವನ್ನು ನೀಡಿದ್ದಾರೆ. 

‘ಅರ್ದಂಬರ್ಧ ಪ್ರೇಮ ಕಥೆ’ಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಬಕ್ಸಸ್ ಮೀಡಿಯಾ ಚಿತ್ರವನ್ನು ನಿರ್ಮಿಸಿದೆ. ಲೈಟ್ ಹೌಸ್ ಮೀಡಿಯಾ ಮತ್ತು ಆರ್‌ಎಸಿ ವಿಷುವಲ್ಸ್ ಕೂಡಾ ನಿರ್ಮಾಣದಲ್ಲಿ ಕೈಜೋಡಿಸಿವೆ. ಸೂರ್ಯ ಛಾಯಾಚಿತ್ರಗ್ರಹಣ, ಸಂತೋಷ್ ರಾಧಾಕೃಷ್ಣನ್ ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್ ತಂತ್ರಜ್ಞಾನದ ಕೆಲಸವನ್ನೂ ನಿಭಾಯಿಸಿದ್ದಾರೆ. ರ‍್ಯಾಪರ್‌ ಆಲ್ ಓಕೆ ಅಲೋಕ್‌ ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರೂಪಕಿ ಶ್ರೇಯಾ ಬಾಬು, ವೆಂಕಟ್ ಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಮೊದಲಾದವರ ತಾರಾಗಣ ಚಿತ್ರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT