ಈ ತಿಂಗಳ ಅಂತ್ಯಕ್ಕೆ ಬಿಗ್ಬಾಸ್ ಪ್ರಾರಂಭವಾಗಲಿದೆ ಎಂಬ ಸುಳಿವನ್ನು ಸುದೀಪ್ ಈ ಹಿಂದೆ ನೀಡಿದ್ದರು. ಇದೀಗ ಪ್ರಾರಂಭ ದಿನಾಂಕ ಅಧಿಕೃತವಾಗಿದ್ದು ಸೆ.28ರಿಂದ ಬಿಗ್ಬಾಸ್ ಸೀಸನ್ 12ರ ಆಟ ಶುರುವಾಗಲಿದೆ.

‘ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್ಬಾಸ್ ಸೀಸನ್ 12ರ ಗ್ರಾಂಡ್ ಓಪನಿಂಗ್ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್ಸ್ಟಾರ್ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ’ ಎಂದು ವಾಹಿನಿ ತಿಳಿಸಿದೆ.

ಕಳೆದ ಸೀಸನ್ ಮುಗಿಯುತ್ತಿದ್ದಂತೆ ಬಿಗ್ಬಾಸ್ಗೆ ಬಹಿರಂಗವಾಗಿ ವಿದಾಯ ಘೋಷಿಸಿದ್ದ ಸುದೀಪ್ ಅವರೇ ಈ ಬಾರಿಯೂ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಈ ಬಾರಿ ‘Expect the Unexpected’ ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮ ನಡೆಯಲಿದೆ.

‘ಬಿಗ್ಬಾಸ್’ ಮನೆಯ ಪ್ರತೀ ಕೋನವೂ, ಕೋಣೆಯೂ ವಿಭಿನ್ನವಾಗಿರುವಂತೆ, ಮನೆಯ ಸದಸ್ಯರೂ ಈ ಸಲ ಭಿನ್ನ. ನಟರು, ಹಾಸ್ಯನಟರು, ಗಾಯಕರು, ಬಾಣಸಿಗರು...ಹೀಗೆ ಬೇರೆ ಬೇರೆ ಕ್ಷೇತ್ರಗಳ ಆಸಕ್ತಿಕರ ವ್ಯಕ್ತಿಗಳು ಬಿಗ್ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.