ಶನಿವಾರ, ಮಾರ್ಚ್ 25, 2023
29 °C

ರಣವೀರ್ ಸಿಂಗ್ ಬರ್ತಡೇ: ನಟನೆ ಕಲಿಕೆಯ ಮೊದಲನೇ ದಿನದ ವಿಡಿಯೊ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟ ರಣವೀರ್ ಸಿಂಗ್ ಅವರಿಗಿಂದು (ಜುಲೈ 6) ಜನ್ಮದಿನದ ಸಂಭ್ರಮ. 36ನೇ ವಸಂತಕ್ಕೆ ಕಾಲಿಟ್ಟಿರುವ ಅವರು ಈವರೆಗೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮುಖ್ಯವಾಗಿ ಕನ್ನಡತಿ ದೀಪಿಕಾ ಪಡುಕೋಣೆ ಅವರ ಪತಿ. ರಣವೀರ್ ಸಿಂಗ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

2010 ರಲ್ಲಿ ಅನುಷ್ಕಾ ಶರ್ಮಾ ಜೊತೆ 'ಬ್ಯಾಂಡ್ ಬಾಜಾ ಭಾರತ್' ಚಿತ್ರದ ಮೂಲಕ ರಣವೀರ್ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅಂದಿನಿಂದ ಅವರು ತಮ್ಮ ಸರಿಸಾಟಿಯಿಲ್ಲದ ನಟನಾ ಕೌಶಲ್ಯ ಮತ್ತು ಅತ್ಯುತ್ತಮ ಫ್ಯಾಷನ್ ಪ್ರಜ್ಞೆಯಿಂದ ಅಭಿಮಾನಿಗಳನ್ನು ರಂಜಿಸುವುದನ್ನು ನಿಲ್ಲಿಸಿಲ್ಲ. ಅವರ ಜನ್ಮದಿನದಂದು, ಅಭಿಮಾನಿಗಳು ರಣವೀರ್ ಅವರು ನಟನಾ ತರಗತಿಯಲ್ಲಿ ಹೇಗೆ ನಟಿಸಬೇಕೆಂದು ಕಲಿಯುತ್ತಿದ್ದ ದಿನಗಳ ಹಳೆಯ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ರಣವೀರ್ ಸಿಂಗ್ ಅವರು ಆಗಾಗ್ಗೆ ಗಮನ ಸೆಳೆಯುವ ವಿಡಿಯೊಗಳು ಮತ್ತು ಫೊಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ನಟನಾ ತರಗತಿಯ ಮೊದಲ ದಿನದ ಹಳೆಯ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ರಣವೀರ್ ಅವರು ನೃತ್ಯ ಮಾಡುತ್ತಾರೆ ಮತ್ತು ಅವರ ಸುತ್ತಲಿರುವ ಎಲ್ಲರನ್ನು ನಗಿಸುತ್ತಾರೆ.

ವಿಡಿಯೊದಲ್ಲಿ ತುಂಬಾ ವಿಭಿನ್ನವಾಗಿ ಕಾಣುವ ರಣವೀರ್ ಅವರು, ಡೆನಿಮ್‌ನ ನೀಲಿ ಬಣ್ಣದ ಶರ್ಟ್ ಮತ್ತು ಚಿನ್ನದ ಸರವನ್ನು ಧರಿಸಿದ್ದಾರೆ.

ಶುಭಾಶಯ ಕೋರಿದ ನಟ ವಿಕ್ಕಿ ಕೌಶಲ್

ಈ ವಿಶೇಷ ದಿನದಂದು ರಣವೀರ್ ಸಿಂಗ್ ಅವರಿಗೆ ಶುಭ ಹಾರೈಸಿದ ಚಿತ್ರರಂಗದ ಪೈಕಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಮೊದಲಿಗರು. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಣವೀರ್ ಸಿಂಗ್ ಅವರ ಫೋಟೊ ಹಂಚಿಕೊಂಡಿದ್ದು, 'ಹ್ಯಾಪಿ ಬರ್ತಡೇ ಚಾಂಪಿಯನ್' ಎಂದು ಬರೆದಿದ್ದಾರೆ.

ಇದನ್ನೂ ಓದಿ: 

ಬ್ಯಾಂಡ್ ಬಾಜಾ ಭಾರತ್ ಚಿತ್ರಕ್ಕೆ ಪದಾರ್ಪಣೆ ಮಾಡಿದ ನಂತರ ರಣವೀರ್ ಸಿಂಗ್ ಅವರು, ಲೂಟೆರಾ, ಗಲ್ಲಿ ಬಾಯ್, ಸಿಂಬಾ, ಬಾಜಿರಾವ್ ಮಸ್ತಾನಿ, ಗುಂಡೆ ಮತ್ತು ಮೋರ್ ಒಳಗೊಂಡಂತೆ ಅನೇಕ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಸದ್ಯ ರಣವೀರ್ ಅವರು ತಮ್ಮ ಮುಂದಿನ ಚಿತ್ರ '83' ನ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು