ಬುಧವಾರ, ಡಿಸೆಂಬರ್ 8, 2021
25 °C

ಶಾರ್ಟ್ಸ್ ಧರಿಸಿ ವಾಕ್‌: ಟ್ರೋಲ್‌ಗೆ ಗುರಿಯಾದ ಶಾಹಿದ್ ಕಪೂರ್ ಪತ್ನಿ ಮೀರಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ನಟ -ನಟಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಏನಾದರೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಆದರಂತೆ ನಟ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರು ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಬರುವಾಗ ಮುಂಬೈ ಏರ್‌ಪೋರ್ಟ್​ನಲ್ಲಿ ಮೀರಾ ಧರಿಸಿದ್ದ ಡ್ರೆಸ್ ಎಲ್ಲರ ಕಣ್ಣು ಕೆಂಪಾಗಿಸಿದೆ.

ನಟ ಶಾಹೀದ್ ಕಪೂರ್ ಅವರು ಪತ್ನಿ ಮೀರಾ ರಜಪೂತ್, ಮಕ್ಕಳೊಂದಿಗೆ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದರು. ಮಾಲ್ಡೀವ್ಸ್‌ನ‌ಲ್ಲಿ ಕೆಲ ದಿನಗಳನ್ನು ಕಳೆದಿದ್ದ ಶಾಹೀದ್ ಕುಟುಂಬ ಇತ್ತೀಚಿಗಷ್ಟೇ ಮುಂಬೈಗೆ ವಾಪಸ್ ಆಗಿದ್ದಾರೆ.

ಮೀರಾ ರಜಪೂತ್ ಶಾರ್ಟ್ಸ್ ಧರಿಸಿದ್ದರು. ಶಾರ್ಟ್ಸ್ ತೀರಾ ಚಿಕ್ಕದಾಗಿರುವುರಿಂದ ಅವರು ‌‌ಟ್ರೋಲ್‌ಗೆ ಗುರಿಯಾಗಿದ್ದಾರೆ. ಮೀರಾ ಪ್ಯಾಂಟ್ ಧರಿಸಿದ್ದರೆ ಚೆನ್ನಾಗಿರುತ್ತಿತ್ತು. ಪ್ಯಾಂಟ್ ಹಾಕೋದನ್ನು ಮೀರಾ ಮರೆತುಬಿಟ್ರಾ?, ಪುರುಷರ ಮೇಲಿನ ಗೌರವ ನನಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮೈತುಂಬಾ ಬಟ್ಟೆ ತೊಟ್ಟು ಪುರುಷರು ತಮ್ಮ ಗೌರವವನ್ನು ಕಾಪಾಡಿಕೊಳ್ಳುತ್ತಾರೆ. ಮಗು ಮೈತುಂಬಾ ಬಟ್ಟೆ ಧರಿಸಿದೆ. ಆದರೆ ತಾಯಿನೇ ಪ್ಯಾಂಟ್ ಹಾಕಿಲ್ಲ’ ಎಂದು ಟ್ರೋಲಿಗರು ಕಾಮೆಂಟ್ ಮಾಡಿದ್ದಾರೆ.

2015 ಜುಲೈ 7ರಂದು ಶಾಹೀದ್ ಕಪೂರ್ ಮತ್ತು ಮೀರಾ ರಜಪೂತ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ... ಪ್ರಜ್ವಲ್​ ​-ರಾಗಿಣಿ ಜೋಡಿಗೆ 6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು