ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ ಸಿನಿಮಾದ ತಾಲೀಮು ಗೀತೆ 'ಪರಿಂದ' ವಿಡಿಯೊ ಹಂಚಿಕೊಂಡ ಪರಿಣಿತಿ ಚೋಪ್ರಾ

Last Updated 13 ಮಾರ್ಚ್ 2021, 10:41 IST
ಅಕ್ಷರ ಗಾತ್ರ

ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್ ಅವರ ಜೀವನಾಧಾರಿತಸಿನಿಮಾ ಬಾಲಿವುಡ್‌ನಲ್ಲಿ ಸೆಟ್ಟೇರುತ್ತಿರುವುದುನಿಮಗೆಲ್ಲಾ ಗೊತ್ತೇ ಇದೆ. ‘ಸೈನಾʼಹೆಸರಿನ ಈ ಚಿತ್ರದಲ್ಲಿನಟಿ ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರಜಾಗಕ್ಕೆ ಪರಿಣಿತಿ ಚೋಪ್ರಾ ಬಂದದ್ದೂ ಈಗ ಹಳೇಸುದ್ದಿ.ಸದ್ಯ ಚೋಪ್ರಾ ಅವರು ಈ ಚಿತ್ರದ ತಾಲೀಮು ಗೀತೆ ‘ಪರಿಂದʼ (ಹಕ್ಕಿ) ವಿಡಿಯೊವನ್ನು ಹಂಚಿಕೊಂಡಿದ್ದಾರೆ ಎಂಬುದು ಹೊಸ ವಿಚಾರ.

ಟಿ-ಸಿರೀಸ್‌ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿರುವ ವಿಡಿಯೊವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿರುವ ಚೋಪ್ರಾ, ‘ನನ್ನ ಹೊಸ ತಾಲೀಮು ಗೀತೆʼ ಎಂದು ಬರೆದುಕೊಂಡಿದ್ದಾರೆ.

ಎರಡೂವರೆ ನಿಮಿಷದ ಈ ವಿಡಿಯೊದಲ್ಲಿ, ವಿಶ್ವದ ಮಾಜಿ ನಂಬರ್‌ 1 ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರ ಪಾತ್ರಕ್ಕಾಗಿ ಪರಿಣಿತಿ ಅಪಾರಕಸರತ್ತು ನಡೆಸಿರುವುದು ಹಾಗೂಗುರಿಸಾಧನೆಗಾಗಿ ಸೈನಾ ಪಟ್ಟ ಪಾಡು, ಕಾಪಾಡಿಕೊಂಡ ಬದ್ಧತೆಯಕಥೆ ಹೇಳುತ್ತದೆ. ಸಂಪೂರ್ಣ ವಿಡಿಯೊವನ್ನು ಆವರಿಸಿಕೊಂಡಿರುವ ಪರಿಣಿತಿ ಅಭಿನಯದಲ್ಲಿ ಸಿನಿರಸಿಕರ ಮನ ಗೆಲ್ಲುತ್ತಾರೆ.

ಮನೋಜ್‌ ಮುಂತಾಶಿರ್‌ ಬರೆದಿರುವ ಈ ಗೀತೆಗೆ ಅಮಲ್‌ ಮಲಿಕ್‌ ಸಂಗೀತ ಸಂಯೋಜಿಸಿ ದನಿಯಾಗಿದ್ದಾರೆ.

ಈ ಚಿತ್ರದ ಟ್ರೇಲರ್‌ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನದಂದು ಬಿಡುಗಡೆ ಮಾಡಲಾಗಿತ್ತು. ಪರಿಣಿತಿ ಅದನ್ನೂ ಹಂಚಿಕೊಂಡಿದ್ದರು. ಹರಿಯಾಣದ ಸಣ್ಣ ಹಳ್ಳಿಯೊಂದರ ಹುಡುಗಿ ವಿಶ್ವದ ನಂ.1 ಬ್ಯಾಡ್ಮಿಂಟನ್‌ ಆಟಗಾರ್ತಿಯಾಗುವ ಕನಸು ಕಂಡದ್ದು, ಅದಕ್ಕಾಗಿ ಎದುರಿಸಿದ ಸವಾಲುಗಳು, ಆಟದಂಗಳದಲ್ಲಿನ ವೈಫಲ್ಯಹಾಗೂ ಪೋಷಕರು ಸೈನಾ ʼಜರ್ನಿʼಯುದ್ದಕ್ಕೂ ನೆರವಿಗೆ ನಿಂತ ಬಗೆಯನ್ನು ಟ್ರೇಲರ್‌ ತೆರೆದಿಟ್ಟಿತ್ತು.

ಚಿತ್ರವನ್ನು ಅಮೋಲ್‌ ಗುಪ್ಟೆ ನಿರ್ದೇಶಿಸಿದ್ದು, ಭೂಷಣ್‌ ಕುಮಾರ್‌, ಕ್ರಿಶನ್‌ ಕುಮಾರ್‌, ಸುಜಯ್‌ ಜಯ್‌ರಾಜ್‌ ಮತ್ತು ರಾಜೇಶ್‌ ಶಾ ಹಣ ಹೂಡಿದ್ದಾರೆ. ಸಿನಿಮಾ ಮಾರ್ಚ್‌ 26 ರಂದು ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT