ಗೋವಿಂದ ಜತೆಗಿನ ಪುನರ್‌ಮಿಲನದ ಫೋಟೋ ಹಂಚಿಕೊಂಡ ರವೀನಾ ಟಂಡನ್

ಬೆಂಗಳೂರು: ಬಹಳಷ್ಟು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದ ಬಾಲಿವುಡ್‌ನ ಪ್ರಮುಖ ನಟ ಗೋವಿಂದ ಮತ್ತು ನಟಿ ರವೀನಾ ಟಂಡನ್ ಈಗ ಪುನರ್‌ಮಿಲನದ ಮೂಲಕ ಸುದ್ದಿಯಾಗಿದ್ದಾರೆ.
90ರ ದಶಕದಲ್ಲಿ ಈ ಜೋಡಿ ಬಾಲಿವುಡ್‌ನಲ್ಲಿ ಹೆಚ್ಚು ಪ್ರಸಿದ್ಧಿಯಲ್ಲಿತ್ತು. ನಟ ಗೋವಿಂದ ಜತೆಗಿನ ಸೆಲ್ಫಿ ಒಂದನ್ನು ನಟಿ ರವೀನಾ ಟಂಡನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ, ಅಂದಿನ ದಿನಗಳನ್ನು ಅಭಿಮಾನಿಗಳಿಗೆ ಮತ್ತೆ ನೆನಪಿಸಿದ್ದಾರೆ.
ಅಲ್ಲದೆ, ಮತ್ತೆ ನಾವಿಬ್ಬರೂ ಜತೆಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದೇವೆ, ಎಲ್ಲಿ? ಯಾವಾಗ? ಏನು ಎನ್ನುವುದನ್ನು ಕಾದು ನೋಡಿ ಎಂದು ರವೀನಾ ಟಂಡನ್ ಹೇಳಿರುವುದು ಗೋವಿಂದ ಹಾಗೂ ನಟಿಯ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ.
Bigg Boss 8: ಕ್ಯಾಪ್ಟನ್ ಆದ ಮೊದಲ ಮಹಿಳೆ: ಸಂಬರಗಿ–ಚಂದ್ರಚೂಡ್ ಬಿಗ್ ಫೈಟ್
ಇನ್ಸ್ಟಾದ ಪ್ರತಿ ಪ್ರಾಯೋಜಿತ ಪೋಸ್ಟ್ನಿಂದ ಕೊಹ್ಲಿ, ಪ್ರಿಯಾಂಕಾ ಗಳಿಸುವುದೆಷ್ಟು?
ಆಂಟಿ ನಂ.1, ದುಲ್ಹೆ ರಾಜಾ, ಬಡೇ ಮಿಯಾನ್ ಛೋಟೇ ಮಿಯಾನ್, ಅನಾರಿ ನಂ.1 ಸಹಿತ ಹಲವು ಸಿನಿಮಾಗಳಲ್ಲಿ ನಟ ಗೋವಿಂದ ಮತ್ತು ನಟಿ ರವೀನಾ ಟಂಡನ್ ಜತೆಯಾಗಿ ಕಾಣಿಸಿಕೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.