ಮುಂಬೈ: ಚಲನಚಿತ್ರ ನಿರ್ಮಾಪಕ ದಿವಂಗತ ವಿ. ಶಾಂತಾರಾಮ್ ಅವರ ಪತ್ನಿ ಹಿರಿಯ ನಟಿ ಸಂಧ್ಯಾ ಶಾಂತಾರಾಮ್ (94) ಅವರು ನಿಧನರಾಗಿದ್ದಾರೆ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶನಿವಾರ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶಾಂತಾರಾಮ್ ಅವರ ಮೂರನೇ ಪತ್ನಿಯಾಗಿರುವ ಸಂಧ್ಯಾ ಅವರು ‘ದೋ ಆಂಖೇನ್ ಬಾರಾ ಹಾತ್’, ‘ನವರಂಗ್’, ‘ಝನಕ್ ಝಾನಕ್ ಪಾಯಲ್ ಬಾಜೆ’, ಮತ್ತು ‘ಪಿಂಜ್ರಾ’ದಂತಹ ಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ಅಭಿನಯಿಸಿದ್ದಾರೆ.

‘ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂಧ್ಯಾ ಅವರು ಶುಕ್ರವಾರ ರಾತ್ರಿ 10 ಗಂಟೆಗೆ ಅವರು ವಾಸಿಸುತ್ತಿದ್ದ ರಾಜ್ಕಮಲ್ ಸ್ಟುಡಿಯೊದಲ್ಲಿ ನಿಧನರಾಗಿದ್ದಾರೆ’ ಎಂದು ಅವರ ಮಗ ಕಿರಣ್ ಶಾಂತಾರಾಮ್ ತಿಳಿಸಿದ್ದಾರೆ.

1950 ಮತ್ತು 60ರ ದಶಕದ ಜನಪ್ರಿಯ ನಟಿ ಸಂಧ್ಯಾ ಪ್ರಧಾನವಾಗಿ ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.