ನಿಮ್ಮ ದೇಹದ ಕುರಿತು ತಪ್ಪು ಭಾವನೆ ಬೆಳೆಸಿಕೊಳ್ಳಬೇಡಿ: ಶಿಖಾ ತಸಾನಿಯ

ಬೆಂಗಳೂರು: ನಿಮ್ಮ ದೇಹದ ಕುರಿತು ನೀವು ಯಾವತ್ತೂ ತಪ್ಪು ಭಾವನೆ ಹೊಂದಬೇಡಿ, ದೇಹವನ್ನು ಪ್ರೀತಿಸಿ ಎಂದು ನಟಿ ಶಿಖಾ ತಸಾನಿಯ ಹೇಳಿದ್ದಾರೆ.
ಬಾಲಿವುಡ್ ನಟ ಮತ್ತು ನಟಿಯರು ಫಿಟ್ನೆಸ್ ಮತ್ತು ವರ್ಕೌಟ್ ಕುರಿತು ಸಾಮಾಜಿಕ ತಾಣಗಳ ಮೂಲಕ ಸದಾ ಪೋಸ್ಟ್ ಮಾಡುತ್ತಾ ಜನರಿಗೆ ಉತ್ತೇಜನ ನೀಡುತ್ತಾರೆ.
ನಿಮ್ಮ ದೇಹ ‘ಪರ್ಫೆಕ್ಟ್’ ಎನ್ನುವ ಮಾದರಿಯಲ್ಲಿ ಇಲ್ಲದಿದ್ದರೆ ಅದಕ್ಕೆ ಬೇಸರಪಡಬೇಕಿಲ್ಲ. ಬದಲಾಗಿ ಹೇಗಿದೆಯೋ, ಹಾಗೆಯೇ ಅದನ್ನು ಪ್ರೀತಿಸಿ, ನಿಮ್ಮ ದೇಹ ಸುಂದರವಾಗಿದೆ, ಅದನ್ನು ಪ್ರೀತಿಯಿಂದ ನೋಡಿಕೊಳ್ಳಿ ಎಂದು ನಟಿ ಶಿಖಾ ಹೇಳಿದ್ದಾರೆ.
ನಟಿಯರ ದೇಹದ ಕುರಿತು ಸಾಮಾಜಿಕ ತಾಣಗಳಲ್ಲಿ ಕಮೆಂಟ್ ಮಾಡುವುದು ಮತ್ತು ಹೀಯಾಳಿಸುವುದು ನಡೆಯುತ್ತಲೇ ಇರುತ್ತದೆ.
ನನ್ನ ಬಾಳ ಸಂಗಾತಿಯ ಬಗ್ಗೆ ಶೀಘ್ರದಲ್ಲೇ ನಿಮಗೆ ತಿಳಿಯಲಿದೆ: ಕಂಗನಾ
ಅಂತಹ ಸಂದರ್ಭದಲ್ಲಿ ಅವುಗಳ ಕುರಿತು ಗಮನ ಹರಿಸದೆ, ನೀವು ಹೇಗಿದ್ದೀರೋ, ಅದನ್ನು ಒಪ್ಪಿಕೊಳ್ಳಿ, ದೇಹದ ಕುರಿತು ತಪ್ಪು ಭಾವನೆ ಹೊಂದುವುದು ಸರಿಯಲ್ಲ ಎಂದು ಶಿಖಾ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಒಂದನ್ನು ಪೋಸ್ಟ್ ಮಾಡುವ ಮೂಲಕ ಸಂದೇಶ ನೀಡಿದ್ದಾರೆ.
ಮಾಲ್ಡೀವ್ಸ್ ಕಡಲ ತೀರದಲ್ಲಿ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.