ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಕಂಗನಾಳನ್ನು ಟ್ವಿಟರ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತಿಲ್ಲ: ತಾಪ್ಸಿ ಪನ್ನು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್‌ರನ್ನು ನಾನು ಟ್ವಿಟರ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದು ತಾಪ್ಸಿ ಪನ್ನು ಹೇಳಿದ್ದಾರೆ.

ಕಂಗನಾ ರಣಾವತ್ ಅವರು ಟ್ವಿಟರ್ ನಿಯಮಗಳನ್ನು ಮುರಿದಿದ್ದಾರೆ ಎಂಬ ಕಾರಣ ನೀಡಿ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ.

ಉಭಯ ನಟಿಯರು ಟ್ವಿಟರ್‌ನಲ್ಲಿ ಸದಾ ಒಂದಿಲ್ಲೊಂದು ಕಾರಣಕ್ಕೆ ಜಗಳವಾಡಿಕೊಳ್ಳುತ್ತಿದ್ದರು.

ಕಂಗನಾ ರಣಾವತ್ ಕೆಲವೊಮ್ಮೆ ತಾಪ್ಸಿ ಕುರಿತು ನಿಂದನೆಯ ಮಾತುಗಳನ್ನು ಕೂಡ ಆಡಿದ್ದರು. ಇದರಿಂದಾಗಿ ತಾಪ್ಸಿ ಮತ್ತು ಕಂಗನಾಗೆ ಟ್ವೀಟ್‌ ಜಗಳವೂ ನಡೆದಿತ್ತು.

ಆದರೆ ಈಗ ಕಂಗನಾ ರಣಾವತ್ ಟ್ವಿಟರ್ ಖಾತೆ ಸ್ಥಗಿತಗೊಂಡಿರುವುದರಿಂದ, ಅವರು ಇತರೆ ಸಾಮಾಜಿಕ ತಾಣಗಳಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹೀಗಾಗಿ ಅವರನ್ನು ಟ್ವಿಟರ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂಬ ಪ್ರಶ್ನೆಗೆ, ನಟಿ ತಾಪ್ಸಿ ಪನ್ನು, ಇಲ್ಲ ಎಂದು ಉತ್ತರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು