ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಮೇಕ್‌ ಚಿತ್ರ ಮಾಡಿ ಸ್ವಾಮಿ!

Last Updated 28 ಜುಲೈ 2019, 20:00 IST
ಅಕ್ಷರ ಗಾತ್ರ

ರಿಮೇಕ್‌ ಸಿನಿಮಾ ಮಾಡುವುದನ್ನು ಬಿಡಿ, ಬಾಕ್ಸಾಫೀಸಿನಲ್ಲಿ ನೆಲ ಕಚ್ಚಿದರೂ ‘ಕಳಂಕ್‌’ನಂತಹ ಸ್ವಮೇಕ್‌ ಚಿತ್ರಗಳನ್ನು ಮಾಡಿದರೆ ಚೆನ್ನಾಗಿರುತ್ತದೆ ಎಂದು ನಿರ್ದೇಶಕ ಕರಣ್‌ ಜೋಹರ್‌ಗೆ ಅಭಿಮಾನಿಗಳು ಕಿವಿ ಮಾತು ಹೇಳಿದ್ದಾರೆ.

ಬಾಲಿವುಡ್‌ನಲ್ಲಿ ರಿಮೇಕ್‌ ಚಿತ್ರಗಳು ಹಾಗೂರಿಮಿಕ್ಸ್‌ ಹಾಡುಗಳು ಹೆಚ್ಚಾಗುತ್ತಿರುವುದರ ಬಗ್ಗೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದು, ‘ಡಿಯರ್‌ ಕಾಮ್ರೇಡ್‌’ ಚಿತ್ರವನ್ನು ರಿಮೇಕ್‌ ಮಾಡಲು ಹೊರಟಿರುವ ಕರಣ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕರಣ್‌ ಈ ಬಗ್ಗೆ ಘೋಷಣೆ ಮಾಡಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನೆಟಿಜನ್ನರು,ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ. ರಿಮೇಕ್‌ ಮಾಡುವುದಕ್ಕಿಂತ ‘ಕಳಂಕ್‌’ ಅಂತಹ ಒರಿಜಿನಲ್‌ ಸಿನಿಮಾ ಮಾಡಿ, ಸೋತರೂ ಪರವಾಗಿಲ್ಲ ಎಂದು ಸಲಹೆ ನೀಡಿದ್ದಾರೆ.

ಕರಣ್‌ ಜೋಹರ್‌ ಈಚೆಗೆ ಡಿಯರ್‌ ಕಾಮ್ರೇಡ್‌ ಚಿತ್ರವನ್ನು ವಿಜಯ್‌ ದೇವರಕೊಂಡ ಹಾಗೂ ಚಿತ್ರತಂಡದ ಜೊತೆ ವೀಕ್ಷಿಸಿದ್ದರು. ಅದಾದ ಬಳಿಕ ಆ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಲ್ಲದೇ ಆ ಚಿತ್ರವನ್ನು ಹಿಂದಿಗೆ ರಿಮೇಕ್‌ ಮಾಡುವುದಾಗಿ ಘೋಷಿಸಿದ್ದರು. ಆದರೆ ಈ ಸುದ್ದಿಯಿಂದ ಅವರ ಅಭಿಮಾನಿಗಳು ಸ್ವಾಗತಿಸಿಲ್ಲ. ರಿಮಿಕ್ಸ್‌ ಹಾಡು ಹಾಗೂ ರಿಮೇಕ್‌ ಚಿತ್ರ ಮಾಡುವುದಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT