‘ಗೇಟ್ ನಂಬರ್ 3ಕ್ಕೆ ಹೋಗಲು ನನಗೆ ಪಾಸ್ ಸಿಕ್ಕಿತ್ತು. ಅದರ ಬಳಿ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿಂದ ಹೇಗೋ ಗೇಟ್ ನಂಬರ್ 10ರ ಬಳಿ ಬಂದಾಗ ಜನಸಂದಣಿ ಇತ್ತು. ಇದರಿಂದಾಗಿ ಉಸಿರಾಡಲು ಕಷ್ಟವಾಯಿತು. ದುರಂತದಲ್ಲಿ ಪ್ರಾಣ ಕಳೆದುಕೊಂಡ ಆ ಜೀವಗಳಿಗೆ ಎಷ್ಟು ಕಷ್ಟ ಆಗಿತ್ತೋ, ಏನೋ? ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದು ಚಂದನ್ ಅವರು ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ.