ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ 2021: ಧನಂಜಯ್‌ ಅತ್ಯುತ್ತಮ ನಟ, ಖುಷಿ ಅತ್ಯುತ್ತಮ ನಟಿ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ 2021
Last Updated 22 ಫೆಬ್ರುವರಿ 2021, 4:17 IST
ಅಕ್ಷರ ಗಾತ್ರ

ಬೆಂಗಳೂರು: ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021’ರಲ್ಲಿ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರಕ್ಕಾಗಿ ನಟ ಧನಂಜಯ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ‘ದಿಯಾ’ ಚಿತ್ರದಲ್ಲಿನ ನಟನೆಗಾಗಿ ಖುಷಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಭಾನುವಾರ ಸಂಜೆ ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದ ಸಂಘದಲ್ಲಿ ಈ ಕಾರ್ಯಕ್ರಮ ನಡೆಯಿತು. ದಿಯಾ ಚಿತ್ರವು 2020ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, ಆ್ಯಕ್ಟ್ 1978 ಚಿತ್ರಕ್ಕೆನಿರ್ದೇಶಕ ಮಾಂಸೋರೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. 2020ರಲ್ಲಿ ತೆರೆಕಂಡ ಕನ್ನಡ ಚಿತ್ರಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಸಿನೆಮಾ ಪತ್ರಕರ್ತರು 21 ವಿಭಾಗಗಳಲ್ಲಿ ಆಯ್ಕೆ ಮಾಡಿದ್ದರು. ದಿಯಾ ಚಿತ್ರವು ಒಟ್ಟು ಐದು ಪ್ರಶಸ್ತಿ, ಪಾಪ್‌ಕಾರ್ನ್‌ ಮಂಕಿ ಟೈಗರ್ ಚಿತ್ರಕ್ಕೆ ನಾಲ್ಕು ಹಾಗೂ ಜಂಟಲ್‌ಮನ್ ಚಿತ್ರಕ್ಕೆ ಮೂರು ಪ್ರಶಸ್ತಿಗಳು ದೊರೆತಿವೆ.

ಮನುಷ್ಯೇತರ ವಿಭಾಗದಲ್ಲಿ ಸಿಂಬಾ ಎಂಬ ನಾಯಿಗೆ ಪ್ರಶಸ್ತಿ: ನಾನು ಮತ್ತು ಗುಂಡ ಸಿನಿಮಾದಲ್ಲಿ ಕಾಣಿಸಿಕೊಂಡ ‘ಸಿಂಬಾ’ ಎಂಬ ನಾಯಿ ಮನುಷ್ಯೇತರ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದೆ. ಎಂಟು ವರ್ಷದ ಈ ಲ್ಯಾಬ್ರಡಾರ್ ನಾಯಿಗೆ ‍‘ನಾನ್‌ ಹ್ಯೂಮನ್‌’ ವರ್ಗದಲ್ಲಿ ಪ್ರಶಸ್ತಿ ಕೊಡಲಾಗಿದೆ. ಮಲಯಾಳಂನ ‘ಬ್ಯಾಂಗಲೂರ್‌ ಡೇಸ್‌’, ಗುಲ್ಟು ಹಾಗೂ ಶಿವಾಜಿ ಸುರತ್ಕಲ್‌ ಚಿತ್ರಗಳಲ್ಲೂ ಸಿಂಬಾ ಕಾಣಿಸಿಕೊಂಡಿತ್ತು.

ಪ್ರಶಸ್ತಿ ಪಟ್ಟಿ

1. ಅತ್ಯುತ್ತಮ ಪೋಷಕ ನಟ: ಅಚ್ಯುತ್ ಕುಮಾರ್(ಮಾಯಾ ಬಜಾರ್‌)
2. ಅತ್ಯುತ್ತಮ ಪೋಷಕ ನಟಿ: ತಾರಾ ಅನುರಾಧಾ(ಶಿವಾರ್ಜುನ)
3. ಅತ್ಯುತ್ತಮ ಚಿತ್ರಕಥೆ: ಅಭಿಜಿತ್ ವೈ.ಆರ್‌. ಮತ್ತು ಆಕಾಶ್ ಶ್ರೀವತ್ಸ್( ಶಿವಾಜಿ ಸುರತ್ಕಲ್)
4. ಅತ್ಯುತ್ತಮ ಬಾಲನಟ/ನಟಿ: ಆರಾಧ್ಯ ಎನ್. ಚಂದ್ರ(ಜಂಟಲ್‌ಮನ್‌)
5. ಅತ್ಯುತ್ತಮ ಸಂಗೀತ ನಿರ್ದೇಶಕ: ರಘು ದೀಕ್ಷಿತ್(ಲವ್ ಮಾಕ್ಟೈಲ್‌)

6. ಅತ್ಯುತ್ತಮ ಹಿನ್ನೆಲೆ ಸಂಗೀತ: ಅಜನೀಶ್ ಲೋಕನಾಥ್(ದಿಯಾ)
7. ಅತ್ಯುತ್ತಮ ಗೀತ ರಚನೆ: ನಾಗಾರ್ಜುನ ಶರ್ಮ ಮತ್ತು ಕಿನ್ನಿಲ್ ರಾಜ್(ಜಂಟಲ್‌ಮನ್ - ಮರಳಿ ಮನಸಾಗಿದೆ)
8. ಅತ್ಯುತ್ತಮ ಗಾಯಕ: ಸಂಚಿತ್ ಹೆಗ್ಡೆ (ಜಂಟಲ್‌ಮನ್– ಮರಳಿ ಮನಸಾಗಿದೆ)
9. ಅತ್ಯುತ್ತಮ ಗಾಯಕಿ: ಚಿನ್ಮಯಿ ಶ್ರೀಪಾದ (ದಿಯಾ–ಸೋಲ್ ಆಫ್ ದಿಯಾ)
10. ಅತ್ಯುತ್ತಮ ಛಾಯಾಗ್ರಹಣ: ಶೇಖರ್ ಎಸ್‍( ಪಾಪ್‌ಕಾರ್ನ್‌ ಮಂಕಿ ಟೈಗರ್)
11. ಅತ್ಯುತ್ತಮ ಸಂಭಾಷಣೆ: ಅಶೋಕ್ ಕೆ.ಎಸ್(ದಿಯಾ)
12. ಅತ್ಯುತ್ತಮ ಸಂಕಲನ: ದೀಪು ಎಸ್ ಕುಮಾರ್(ಪಾಪ್‌ಕಾರ್ನ್‌ ಮಂಕಿ ಟೈಗರ್)
13. ಅತ್ಯುತ್ತಮ ನೃತ್ಯ ಸಂಯೋಜನೆ: ಎ.ಹರ್ಷ(ಮಾಯಾ ಬಜಾರ್– ಲೋಕ ಮಾಯಾ ಬಜಾರ)
14. ಅತ್ಯುತ್ತಮ ಸಾಹಸ: ಜಾಲಿ ಬಾಸ್ಟಿನ್(ಪಾಪ್‌ಕಾರ್ನ್‌ ಮಂಕಿ ಟೈಗರ್)
15. ಅತ್ಯುತ್ತಮ ಕಲಾ ನಿರ್ದೇಶನ: ಗುಣ(ಬಿಚ್ಚುಗತ್ತಿ)
16. ಅತ್ಯುತ್ತಮ ವಿಎಫ್‌ಎಕ್ಸ್: ಕಾಣದಂತೆ ಮಾಯವಾದನು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT