ಸಿಂಬಾ, ಶಿಷ್ಯ, ಮಿನಿಮಮ್, ಚಿಂಟು, ಬರ್ಫಿ, ಚಿರು, ಲಿಟಲ್ ಚಿರು, ಜ್ಯೂನಿಯರ್ ಚಿರು ಹೀಗೆ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಮಗುವನ್ನು ಹಲವು ಹೆಸರುಗಳಿಂದ ಕುಟುಂಬದ ಸದಸ್ಯರು ಹಾಗೂ ಚಿರು ಅಭಿಮಾನಿಗಳು ಕರೆಯುತ್ತಿದ್ದರು.
ಇದೀಗ ಜ್ಯೂ.ಚಿರುವಿನ ನಾಮಕರಣಕ್ಕೆ ದಿನ ನಿಗದಿಯಾಗಿದೆ. ಸೆ.3ರಂದು ನಾಮಕರಣ ನಡೆಯಲಿದೆ ಎಂದು ಮೇಘನಾ ರಾಜ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿರುವ ಮೇಘನಾ, ‘ನಮ್ಮ ಲಿಟಲ್ ಪ್ರಿನ್ಸ್‌ಗೆ ಈಗೊಂದು ಹೆಸರು ನಿಗದಿಯಾಗಿದೆ. ನನ್ನನ್ನು ಭೇಟಿಯಾದ ಎಲ್ಲರೂ ಕೇಳಿತ್ತಿದ್ದದ್ದು ಒಂದೇ ಪ್ರಶ್ನೆ. ‘ಏನ್ ಹೆಸ್ರು ಜ್ಯೂನಿಯರ್ ದು’..ಕೊನೆಗೂ ರಾಜ ತನ್ನ ರಾಜಕುಮಾರನಿಗೆ ಹೆಸರು ನಿರ್ಧರಿಸಿದ್ದಾನೆ’ ಎಂದು ಉಲ್ಲೇಖಿಸಿದ್ದಾರೆ.
2020ರ ಜೂನ್ 7ರಂದುತೀವ್ರ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಮೃತಪಟ್ಟಿದ್ದರು.2020ರ ಅಕ್ಟೋಬರ್ 22ರಂದು ಗಂಡು ಮಗುವಿಗೆ ಮೇಘನಾ ಜನ್ಮನೀಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.