ಕೆ.ಆರ್ ಸುರೇಶ್ ನಿರ್ದೇಶನದ ‘ಚಿತ್ರಲಹರಿ’ ಚಿತ್ರದ ಟೀಸರ್ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.

‘ಎರಡು ಕಥೆಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಆದರೆ ಕ್ಲೈಮ್ಯಾಕ್ಸ್ ಒಂದೇ ಆಗಿರುತ್ತದೆ. ಕೋವಿಡ್ ಸಮಯದಲ್ಲೇ ಸಿದ್ಧವಾದ ಕಥೆಯಿದು. ಆದರೆ ಕಳೆದ ವರ್ಷ ಚಿತ್ರೀಕರಣ ಪ್ರಾರಂಭವಾಯಿತು. ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಚಿತ್ರ ತೆರೆಗೆ ಬರಲು ಸಿದ್ಧವಿದೆ. ಪ್ರೀತಿ, ಆ್ಯಕ್ಷನ್, ಸೆಂಟಿಮೆಂಟ್...ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಚಿತ್ರ’ ಎಂದರು ನಿರ್ದೇಶಕ.

ಕೇಸರಿ ನಂದನ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನವನೀತ ಲಕ್ಷ್ಮೀ ನಿರ್ಮಿಸಿದ್ದಾರೆ. ವರುಣ್ ದೇವಯ್ಯ ಹಾಗೂ ಶ್ರೀಕಾಂತ್ ನಾಯಕರು. ಗಾನ್ವಿ ಹಾಗೂ ಹರ್ಷಿತ ನಾಯಕಿಯರು. ಸೂರ್ಯತೇಜ, ಶ್ರೀನಾಥ್, ಪ್ರದೀಪ್, ಚಂದ್ರು, ರಂಗ, ಸತೀಶ್ ಗೌಡ, ತೇಜಸ್ವಿನಿ, ಪದ್ಮ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಸತೀಶ್ ಸಂಗೀತ, ಸೆಂಥಿಲ್ ಕುಮಾರ್ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.