ಕೆ.ಶಿವರಾಮ ಕಾರಂತರ ‘ಚೋಮನದುಡಿ’ ಕಾದಂಬರಿ ಚಿತ್ರವಾಗಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಆ ಕಥೆಯ ಮುಂದುವರಿಕೆ ಚಿತ್ರವೊಂದು ಇದೀಗ ತೆರೆಗೆ ಬರಲು ಸಿದ್ಧಗೊಂಡಿದೆ. ‘ಬಿಚ್ಚುಗತ್ತಿಯ ಬಂಟನ ಬಲ್ಲರೇನ’ ಎಂಬ ಈ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.

ಅನಿಲ್ ದೋರಸಮುದ್ರ ನಿರ್ದೇಶಿಸಿ, ನಿರ್ಮಿಸಿರುವ ಚಿತ್ರಕ್ಕೆ ‘ದುಡಿಯ ಸದ್ದಿಗೆ ಕ್ರಾಂತಿಯ ಎದ್ದಿದೆ’ ಎಂಬ ಅಡಿಬರಹವಿದೆ. ‘ನಮ್ಮ ಸಿನಿಮಾವು ‘ಚೋಮನದುಡಿ’ಯ ಮುಂದುವರಿದ ಭಾಗ. ಮಂದಗಾಮಿ ಚೋಮ ಹೋರಾಟ ಮಾಡಿದರೂ ಭೂಮಿ ಸಿಗುವುದಿಲ್ಲ. ಆತನ ಮಗ ಕಾಳ ನ್ಯಾಯಕ್ಕಾಗಿ ತೀವ್ರಗಾಮಿಯಾಗಿ ಬಿಚ್ಚುಗತ್ತಿಯನ್ನು ಉಪಯೋಗಿಸಿದಾಗ ಏನಾಗುತ್ತದೆ ಎಂಬುದೇ ಕಥೆ. ಅಂತಿಮವಾಗಿ ಅಪ್ಪನ ಆಸೆಯನ್ನು ಕಾಳ ಮತ್ತು ಬೆಳ್ಳಿ ಈಡೇರಿಸಿಕೊಳ್ಳುತ್ತಾರಾ? ಭೂಮಿಯ ಕಥೆ ಏನಾಗುತ್ತದೆ ಎಂಬುದನ್ನು ಕಮರ್ಷಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಭಾವಗಳ ತೀವ್ರತೆಯನ್ನು ಅಚ್ಚುಕಟ್ಟಾಗಿ ಸೆರೆಹಿಡಿದಿದ್ದೇವೆ. ಚಿತ್ರದಲ್ಲಿ ಚೋಮನ ಪಾತ್ರ ಶೇಕಡ ಇಪ್ಪತ್ತರಷ್ಟು ಬರುತ್ತದೆ’ ಎಂದರು ನಿರ್ದೇಶಕ.

ಚೆಲುವರಾಜ್ಗೌಡ, ಬಾಸುಮ ಕೊಡಗು, ಸ್ವೀಡಲ್ ಡಿಸೋಜಾ, ಶೈಲೇಶ್ ಕೆಂಗೇರಿ, ತಾರಾನಾಥ ಬೋಳಾರ್, ಪುಣ್ಯ ಕೊಟ್ಯಾನ್ ಮುಂತಾದವರು ಅಭಿನಯಿಸಿದ್ದಾರೆ. ಪ್ರದ್ಯುಮ್ನ ನರಹಳ್ಳಿ-ದೀಪಕ್ ಕೋಟ್ಯಾನ್ ಸಾಹಿತ್ಯಕ್ಕೆ ಶ್ರೀಶಾಸ್ತ ಸಂಗೀತ ಸಂಯೋಜಿಸಿದ್ದಾರೆ. ಲ್ಯಾಮರಿಂಜ್ ನಿರ್ಮಲ್ ಛಾಯಾಚಿತ್ರಗ್ರಹಣ, ಅನಿಲ್.ಡಿ ಮತ್ತು ಮಾವಿನ್ ಜೋಯಿಲ್ ಪಿಂಟೋ ಸಂಕಲನ ಚಿತ್ರಕ್ಕಿದೆ. ಕಾರ್ಕಳ ಸುತ್ತಮುತ್ತ ಚಿತ್ರೀಕರಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.