ಸೋಮವಾರ, ನವೆಂಬರ್ 30, 2020
26 °C
ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ

ಕೊಡಗಿನಲ್ಲಿ ‘1980 ನಡೆಯುವ ಕಥೆ’ ಸಿನಿಮಾ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಪಟ್ಟಣದ ಭಾರತಿ ವಿದ್ಯಾಸಂಸ್ಥೆಯಲ್ಲಿ ಆರ್.ಕೆ.ಪ್ರೊಡಕ್ಷನ್‌ ವತಿಯಿಂದ ‘1980 ನಡೆಯುವ ಕಥೆ’ ಎಂಬ ಚಲನಚಿತ್ರದ ಚಿತ್ರೀಕರಣವು ಬುಧವಾರ ಆರಂಭ ಆಗಿದ್ದು ಭರದಿಂದ ಸಾಗಿದೆ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ನಿರ್ದೇಶಕ ಜೆ.ರಾಜಕಿರಣ್ ನಿರ್ದೇಶನದಲ್ಲಿ ಪ್ರಿಯಾಂಕಾ ಉಪೇಂದ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಟ ರಮೇಶ್ ಪಂಡಿತ್, ಸಹ ಕಲಾವಿದರಾದ ಅರವಿಂದ್ ರಾವ್ ಹಾಗೂ ಶ್ರೀನಿವಾಸ ನಟಿಸುತ್ತಿದ್ದ ದೃಶ್ಯದ ಚಿತ್ರೀಕರಣ ಸಂಸ್ಥೆಯ ಕೊಠಡಿಯೊಂದರಲ್ಲಿ ನಡೆಯಿತು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಚಿತ್ರಕ್ಕೆ ಜಿನಂತ್ ವಿಕಾಸ್ ಅವರ ಸಂಗೀತವಿದ್ದು ಜೀವ ಆ್ಯಂಟೋನಿ ಕ್ಯಾಮೆರಾ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ನಟಿ ಪ್ರಿಯಾಂಕಾ ಮಾತನಾಡಿ, ಶನಿವಾರಸಂತೆಯಲ್ಲಿಎರಡು ವಾರಗಳ ಚಿತ್ರೀಕರಣ ನಡೆಯಲಿದೆ. ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಚಿತ್ರೀಕರಣಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ಜೊತೆಗೆ ಕೊಡಗಿನ ಪರಿಸರದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.