ಆನ್‌ಲೈನ್‌ನಲ್ಲಿ ರಮ್ಮಿ, ಜೂಜಾಟವಾಡಿ ಬೀದಿಗೆ ಬಂದವರು ಅನೇಕರಿದ್ದಾರೆ. ರಮ್ಮಿ ಆಡಬೇಡಿ ಎಂದು ಜಾಗೃತಿ ಮೂಡಿಸುವ ಸಾಕಷ್ಟು ವಿಡಿಯೊಗಳು ಈಗಾಗಲೇ ವೈರಲ್ ಆಗಿವೆ. ಇದೀಗ ಆನ್‌ಲೈನ್ ರಮ್ಮಿ ಕುರಿತಾದ ಕಥೆ ಹೊಂದಿರುವ ‘ರಮ್ಮಿ ಆಟ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಉಮರ್ ಷರೀಫ್ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

‘ಮನರಂಜನೆಗೆಂದು ಶುರು ಮಾಡಿದ ಆನ್‌ಲೈನ್ ಜೂಜಾಟ ಕೆಲವರ ಜೀವನವನ್ನೇ ನಾಶ ಮಾಡುತ್ತಿದೆ. ಅದಕ್ಕೆ ಒಮ್ಮೆ ಅಡಿಕ್ಟ್ ಆದಮೇಲೆ ಅದನ್ನು ಬಿಡಲು ಸಾಧ್ಯವೇ ಆಗದು. ಈ ಆಟದಿಂದ ಕೆಲವೊಮ್ಮೆ ತುಂಬಾ ಲಾಭ ಆಗಬಹುದು. ಜೊತೆಗೆ ಕೆಟ್ಟದ್ದೂ ಆಗಬಹುದು. ಆಟಕ್ಕೆ ಸರ್ಕಾರವೇ ಅನುಮತಿ ನೀಡಿದೆ. ನಟ,ನಟಿಯರು ಇದನ್ನು ಪ್ರಚಾರ ಮಾಡುವುದರಿಂದ ಅಭಿಮಾನಿಗಳೂ ಅದನ್ನೇ ಅನುಸರಿಸುತ್ತಾರೆ. ಇವೆಲ್ಲದರ ಪರಿಣಾಮವನ್ನು ಚಿತ್ರದಲ್ಲಿ ಹೇಳಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು.

ನಿರೂಪಕ ರಾಘವ ಸೂರ್ಯ, ವಿನ್ಯಾ ಶೆಟ್ಟಿ, ಸ್ನೇಹರಾವ್ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರಲು ತಂಡ ಆಲೋಚಿಸಿದೆ.

ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಕಾರ್ತೀಕ್ ಎಸ್. ಛಾಯಾಚಿತ್ರಗ್ರಹಣ, ಪ್ರಭು ಎಸ್.ಆರ್. ಸಂಗೀತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.