‘ರಾಬರ್ಟ್’ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರು ಈ ಹಿಂದೆ ನಿರ್ದೇಶಿಸಿದ್ದ ‘ಚೌಕ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಫಸಲು ತೆಗೆದಿತ್ತು. ಹಾಗಾಗಿಯೇ, ಈ ಸಿನಿಮಾದ ಮೇಲೂ ನಿರೀಕ್ಷೆಗಳು ಗರಿಗೆದರಿವೆ.

ಪ್ರಸ್ತುತ ‘ರಾಬರ್ಟ್’ ಚಿತ್ರತಂಡ ಶೂಟಿಂಗ್ಗಾಗಿ ವಾರಣಾಸಿಯಲ್ಲಿ ಬೀಡುಬಿಟ್ಟಿದೆ. ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ. ಸಿನಿಮಾಕ್ಕೆ ಕೇವಲ 60 ದಿನಗಳ ಕಾಲ್ಶೀಟ್ ಅಷ್ಟೇ ನೀಡುವುದಾಗಿ ದರ್ಶನ್ ಈ ಹಿಂದೆ ಘೋಷಿಸಿದ್ದರು. ಆದರೆ, ‘ರಾಬರ್ಟ್’ ಚಿತ್ರೀಕರಣ 100 ದಿನ ಪೂರೈಸಿದ್ದು, ದಚ್ಚು ಸ್ವತಃ ತಾವೇ ಹೇಳಿದ್ದ ಹೇಳಿಕೆಯನ್ನು ಮುರಿದಿದ್ದಾರೆ. ಜನವರಿಯಿಂದ ಹಾಡಿನ ಭಾಗದ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.

ಈ ವರ್ಷ ದರ್ಶನ್ ನಟನೆಯ ‘ಯಜಮಾನ’, ‘ಮುನಿರತ್ನ ಕುರುಕ್ಷೇತ್ರ’ ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ. ಎಂ.ಡಿ. ಶ್ರೀಧರ್ ನಿರ್ದೇಶನದ ‘ಒಡೆಯ’ ಚಿತ್ರವೂ ಉತ್ತಮ ಆರಂಭ ಕಂಡಿದೆ. ಹಾಗಾಗಿ, ‘ರಾಬರ್ಟ್’ ಮೇಲೂ ನಿರೀಕ್ಷೆಯ ಭಾರ ದಪ್ಪಟ್ಟಾಗಿದೆ. ಚಿತ್ರದ ಶೂಟಿಂಗ್ನ ಆರಂಭದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಅಭಿಮಾನಿಗಳಲ್ಲಿ ಚಿತ್ರತಂಡ ಬೆರಗು ಮೂಡಿಸಿತ್ತು. ಈಗ ಡಿಸೆಂಬರ್ 25ರಂದು ಫಸ್ಟ್ಲುಕ್ ಅನ್ನು ಬಿಡುಗೆಗೊಳಿಸುವುದಾಗಿ ಘೋಷಿಸಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟೀಮಣಿಯರ ಹೆಸರು ಈ ಚಿತ್ರದ ನಾಯಕಿಯ ಜಾಗಕ್ಕೆ ಕೇಳಿಬಂದಿತ್ತು. ಮೆಹರಿನ್ ಪಿರ್ಜಾ ಅವರು ದರ್ಶನ್ ಜೊತೆಗೆ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಕೊನೆಗೆ, ಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಅಂದಹಾಗೆ ದರ್ಶನ್ ವಿರುದ್ಧ ತೊಡೆ ತೊಟ್ಟಿರುವುದು ತೆಲುಗಿನ ಖ್ಯಾತ ಖಳನಟ ಜಗಪತಿಬಾಬು. ವಿನೋದ್ ಪ್ರಭಾಕರ್ ಕೂಡ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.