ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಶ್ರೀಮಂತ ಮಹಿಳಾ ಸೆಲೆಬ್ರಿಟಿ ದೀಪಿಕಾ ಮುಡಿಗೆ ‘ಏಷ್ಯಾದ ಸೆಕ್ಸಿ ಮಹಿಳೆ’ ಗರಿ

Last Updated 6 ಡಿಸೆಂಬರ್ 2018, 9:54 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ಅತ್ಯಂತ ಅದ್ದೂರಿಯಾಗಿ ಮದುವೆ ಮತ್ತು ಆರತಕ್ಷತೆ ಮುಗಿಸಿದ ಇಬ್ಬರು ಮದುಮಕ್ಕಳು ಮತ್ತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಹೌದು, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಮುಡಿಗೆ ‘ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ’ ಎಂಬ ಗರಿ ಸೇರಿಕೊಂಡಿದೆ. ಕಳೆದ ಬಾರಿ ಮೊದಲ ಸ್ಥಾನ ಗಳಿಸಿದ್ದ ಪ್ರಿಯಾಂಕಾ ಅವರನ್ನು ಹಿಂದಿಕ್ಕಿರುವ ದೀಪಿಕಾ ಆ ಸ್ಥಾನವನ್ನು ಈ ಬಾರಿತಮ್ಮದಾಗಿಸಿಕೊಂಡಿದ್ದಾರೆ.

ಲಂಡನ್‌ನ ಈಸ್ಟರ್ನ್‌ ಐ ಸಾಪ್ತಾಹಿಕವು‍‍ಪ್ರತಿ ವರ್ಷ ನಡೆಸುವ ಏಷ್ಯಾದ 50 ಸೆಕ್ಸಿ ಮಹಿಳೆಯರುಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ಪಾಲ್ಗೊಂಡು ತಮ್ಮಿಷ್ಟದ ಸೆಲೆಬ್ರಿಟಿಗಳಿಗೆ ಮತ ಚಲಾಯಿಸುತ್ತಾರೆ. ಸಾಪ್ತಾಹಿಕವು 15 ವರ್ಷಗಳಿಂದಲೂ ಈ ಸಮೀಕ್ಷೆ ನಡೆಸುತ್ತಿದೆ.

‘ದೀಪಿಕಾ ಪಡುಕೋಣೆ ಬಾಲಿವುಡ್‌ನ ವಿವಾದಾತೀತ ‘ಕ್ವೀನ್‌’ ಹಾಗೂ ಸುಂದರಿಯಾಗಿರುವ ಅವರು ಪ್ರಸಿದ್ಧಿಯ ತುತ್ತತುದಿ ಏರಿದ್ದರೂ ಬಿಗುಮಾನವಿಲ್ಲದ ನಟಿ. ಅವರ ನಮ್ರತೆ ಅನುಕರಣೀಯ. ಅಲ್ಲದೆ, ಮಾನಸಿಕ ಅಸ್ವಸ್ಥರ ಬಗೆಗಿನ ಜಾಗೃತಿ ಅಭಿಯಾನ ಧನಾತ್ಮಕ ಪರಿಣಾಮವನ್ನು ಬೀರುತ್ತಿದೆ. ಅಲ್ಲದೆ ನಮ್ಮೊಳಗನ್ನು ಬೆಳಗಲು ಪ್ರೇರಣೆ ನೀಡುತ್ತಿದೆ. ಹಾಗಾಗಿಎಲ್ಲಾ ಬಗೆಯಿಂದಲೂ ಈ ಗೌರವಕ್ಕೆ ಅರ್ಹರಾಗಿದ್ದಾರೆ’ಎಂದು ಈಸ್ಟರ್ನ್‌ ಐ ಸಾಪ್ತಾಹಿಕ ಮನರಂಜನಾ ವಿಭಾಗದ ಸಂಪಾದಕ ಅಸ್ಜದ್‌ ನಜೀರ್‌ ಹೇಳಿದ್ದಾರೆ.

ಈ ಸಮೀಕ್ಷೆಯಲ್ಲಿ ಕಿರುತೆರೆ ನಟಿ ನಿಯಾ ಶರ್ಮಾ ಮೂರನೇ ಸ್ಥಾನ, ಪಾಕಿಸ್ತಾನದ ನಟಿ ಮಹಿರಾ ಖಾನ್‌ ನಾಲ್ಕನೇ ಸ್ಥಾನ ಗಳಿಸಿದ್ದಾರ.ಉಳಿದಂತೆ ಶಿವಾಂಗಿ ಜೋಷಿ, ಆಲಿಯಾ ಭಟ್‌, ಸೋನಂ ಕಪೂರ್‌, ಹೀನಾ ಖಾನ್‌, ಕತ್ರಿನಾ ಕೈಫ್‌, ನಿತಿ ಟೇಯ್ಲರ್‌ ಕ್ರಮವಾಗಿ 5ರಿಂದ 10ನೇ ಸ್ಥಾನಗದಲ್ಲಿದ್ದಾರೆ. 20ರ ಹರೆಯದ ಶಿವಾಂಗಿ, ಈ ಗೌರವಕ್ಕೆ ಪಾತ್ರರಾದ ಅತ್ಯಂತ ಕಿರಿಯ ಸೆಲೆಬ್ರಿಟಿ. ಅಲ್ಲದೆ, 18ರ ಆಶಿ ಸಿಂಗ್‌ ಎಂಬ ನಟಿಯೂ ಗಮನಾರ್ಹ ಪ್ರಮಾಣದ ಮತಗಳನ್ನು ಗಳಿಸಿದ್ದಾರೆ ಎಂದು ‘ಈಸ್ಟರ್ನ್‌ ಐ’ ಹೇಳಿದೆ.

ಫೋರ್ಬ್ಸ್‌ ಪಟ್ಟಿಯ ಅಗ್ರ ಐದರಲ್ಲಿ ಕಾಣಿಸಿಕೊಂಡ ಮೊದಲ ಮಹಿಳೆ ದೀಪಿಕಾ

ಫೋರ್ಬ್ಸ್‌ ಬಿಡುಗಡೆ ಮಾಡಿರುವ ಭಾರತದ ಅತ್ಯಂತ ಶ್ರೀಮಂತ100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟಿ ದೀಪಿಕಾ ಪಡುಕೋಣೆನಾಲ್ಕನೇ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಪಟ್ಟಿಯ ಅಗ್ರ ಐದು ಸ್ಥಾನಗಳಲ್ಲಿ ಕಾಣಸಿಕೊಂಡ ಮೊದಲ ಮಹಿಳೆ ಎಂಬಈ ಶ್ರೇಯಕ್ಕೂ ಪಾತ್ರವಾಗಿದ್ದಾರೆ.

ಫೋರ್ಬ್ಸ್‌ ನಿಯತಕಾಲಿಕೆಯ ವರದಿ ಪ್ರಕಾರಚಲನಚಿತ್ರ, ಕಿರುತೆರೆ ಹಾಗೂ ಜಾಹೀರಾತು ಮೂಲದಿಂದ 2017ರ ಅಕ್ಟೋಬರ್ 1ರಿಂದ 2018ರ ಸೆಪ್ಟೆಂಬರ್‌ 30ರ ಅವಧಿಯಲ್ಲಿದೀಪಿಕಾ ಗಳಿಸಿದಒಟ್ಟು ಆದಾಯ ₹112.80 ಕೋಟಿ. ಅವರ ಪತಿರಣವೀರ್‌ ಸಿಂಗ್‌ ಇದೇ ಅವಧಿಯಲ್ಲಿ ₹ 84.67 ಕೋಟಿ ಗಳಿಕೆಯೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.

ದೀಪಿಕಾ ಮಾತ್ರವಲ್ಲದೆ ಅಲಿಯಾ ಭಟ್‌, ಅನುಷ್ಕಾ ಶರ್ಮಾ, ಕತ್ರೀನಾ ಕೈಫ್‌, ಪಿ.ವಿ. ಸಿಂಧು, ಸೈನಾ ನೆಹ್ವಾಲ್‌ ಸೇರಿ ಒಟ್ಟು 18 ಮಹಿಳೆಯರು ಪಟ್ಟಿಯಲ್ಲಿದ್ದಾರೆ.

₹ 253.25 ಕೋಟಿ ಆದಾಯ ಹೊಂದಿರುವಸಲ್ಮಾನ್‌ ಖಾನ್‌ಮೊದಲ ಸ್ಥಾನದಲ್ಲಿಕಾಣಿಸಿಕೊಂಡಿದ್ದಾರೆ. ನಂತರದ ಎರಡು ಸ್ಥಾನಗಳಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌ ಇದ್ದು, 2018ರಲ್ಲಿ ಇವರಿಬ್ಬರು ಕ್ರಮವಾಗಿ₹ 228.09 ಕೋಟಿ,₹ 185 ಕೋಟಿ ಆದಾಯ ಗಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತದ ತಾರೆಯರ ಒಟ್ಟು ಗಳಿಕೆಯೂ ಶೇ.17ರಷ್ಟು ಏರಿಕೆಯಾಗಿದೆ. ಕಳೆದ ಬಾರಿ ₹ 2,683 ಕೋಟಿ ಗಳಿಸಿದ್ದ ತಾರೆಯರು ಈ ಬಾರಿ ₹ 3,140.25 ಕೋಟಿ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT