ಮುಂಬೈ: 75ನೇ ಕಾನ್ ಚಲನಚಿತ್ರೋತ್ಸವಕ್ಕೆ ತೀರ್ಪುಗಾರರಾಗಿ ಆಯ್ಕೆಯಾಗಿ ಸುದ್ದಿ ಮಾಡಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋನೆ, ಚಿತ್ರೋತ್ಸವದಲ್ಲಿ ತಮ್ಮ ಗ್ಲಾಮರಸ್ ಲುಕ್‌ನಿಂದ ಮತ್ತೆ ಟ್ರೆಂಡ್ ಆಗಿದ್ದಾರೆ.

ಕಪ್ಪು ಉಡುಗೆ ತೊಟ್ಟ ಮಾದಕ ಚಿತ್ರಗಳನ್ನು ಅವರುಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿವೆ.

ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ತಾವು ದೇಶವನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ನಟನಾ ವೃತ್ತಿಜೀವನದಿಂದ ಈವರೆಗೆ ನಾನು ಪಡೆದಿರುವುದಕ್ಕೆಲ್ಲ ಕೃತಜ್ಞಳಾಗಿದ್ದೇನೆ ಎಂದು ನ್ಯೂಸ್ ಪೋರ್ಟಲ್‌ವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರತಿ ಭಾರಿ ಚಲನಚಿತ್ಸೋವಕ್ಕೆ ಬಂದಾಗ ರೋಮಾಂಚನದ ಅನುಭವವಾಗುತ್ತದೆ ಎಂದಿದ್ದಾರೆ.

ಜ್ಯೂರಿಯಾಗಿ ಆಯ್ಕೆಯಾದ ಬಗ್ಗೆ ಮಾತನಾಡಿರುವ ಅವರು, ನಿಜಕ್ಕೂ ಅದೊಂದು ಕನಸಿನಂತೆ ಭಾಸವಾಯಿತು. ಅಚ್ಚರಿ ಎನಿಸಿತು. ನನ್ನನ್ನು ಹೇಗೆ ಆಯ್ಕೆ ಮಾಡಿದರು ಎಂಬ ಬಗ್ಗೆ ಯೋಚಿಸಿದ್ದೆ ಎಂದು ಹೇಳಿದ್ದಾರೆ.

ಇದೇ 17ರಿಂದ ಆರಂಭವಾಗಲಿರುವ ಕಾನ್ ಚಲನಚಿತ್ರೋತ್ಸವವು 28ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.