ಮಂಗಳವಾರ, ಅಕ್ಟೋಬರ್ 27, 2020
19 °C

ದೀಪಿಕಾ ಪಡುಕೋಣೆ ಪಾಲಿಗೆ ‘ಸೂಪರ್‌ ಡ್ರಗ್‌’ ಅಂದ್ರೆ ಯಾರು ಗೊತ್ತೇ?

. Updated:

ಅಕ್ಷರ ಗಾತ್ರ : | |

Prajavani

ನಟಿ ದೀಪಿಕಾ ಪಡುಕೋಣೆ ಮತ್ತು ಆಕೆಯ ಮ್ಯಾನೇಜರ್‌ ಕರೀಷ್ಮಾ ಪ್ರಕಾಶ್‌ ನಡುವೆ ಡ್ರಗ್ಸ್‌ ಪೂರೈಕೆ ಸಂಬಂಧ ನಡೆದಿರುವ ವಾಟ್ಸ್‌ಆ್ಯಪ್‌ ಸಂದೇಶ ವಿನಿಮಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಡ್ರಗ್ಸ್ ಜಾಲದ ಬೇರುಗಳು ಡಿಪ್ಪಿಯ ಮನೆ ಅಂಗಳ ಪ್ರವೇಶಿಸಿರುವ ಬಗ್ಗೆ ಬಿಸಿ ಚರ್ಚೆಯೂ ಶುರುವಾಗಿದೆ.

ಈಗಾಗಲೇ, ವಿಚಾರಣೆಗೆ ಹಾಜರಾಗುವಂತೆ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ಕರೀಷ್ಮಾಗೆ ನೋಟಿಸ್‌ ಕೂಡ ಜಾರಿಗೊಳಿಸಿದೆ. ಈಗ ಎಲ್ಲರ ಬಾಯಲ್ಲೂ ಬಾಲಿವುಡ್‌ನಲ್ಲಿ ಆಳವಾಗಿ ಬೇರೂರಿರುವ ಡ್ರಗ್ಸ್ ಜಾಲದ ಬಗ್ಗೆಯೇ ಚರ್ಚೆ. 

ಈ ನಡುವೆಯೇ ದೀಪಿಕಾ ಪಡುಕೋಣೆಯು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಹಳೆಯ ಪೋಸ್ಟ್‌ವೊಂದು ಈಗ ಸದ್ದು ಮಾಡುತ್ತಿದೆ. ಡಿಪ್ಪಿಯು ತನ್ನ ಪತಿ ರಣವೀರ್‌ ಸಿಂಗ್ ಅವರನ್ನು ‘ಸೂಪರ್‌ ಡ್ರಗ್‌’ ಎಂದು ಕರೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ 2019ರಲ್ಲಿ ರಣವೀರ್‌ ಸಿಂಗ್‌ ಟೀ ಶರ್ಟ್ ಧರಿಸಿರುವ ಫೋಟೊವೊಂದನ್ನು ದೀಪಿಕಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಟೀ ಶರ್ಟ್‌ ಮೇಲೆ ‘ಲವ್‌ ಈಸ್‌ ಎ ಸೂಪರ್‌ ಪವರ್‌’ ಎಂದು ಬರೆಯಲಾಗಿತ್ತು. ಇದಕ್ಕೆ ಡಿಪ್ಪಿಯು, ‘...ಮತ್ತು ನೀನು ನನ್ನ ಸೂಪರ್‌ ಡ್ರಗ್‌’ ಎಂದು ಶೀರ್ಷಿಕೆ ನೀಡಿದ್ದಾರೆ.

ದೀಪಿಕಾ ಮತ್ತು ಕರೀಷ್ಮಾ ನಡುವಿನ ಸಂದೇಶ ವಿನಿಮಯದಲ್ಲಿ ‘ಕೊಕೊ’ ಎಂಬ ಪದ ಬಳಕೆಯಾಗಿದೆ. ಕೊಕೊ ಎಂಬುದು ಮುಂಬೈನ ಕಮಲಾ ಮಿಲ್‌ ಪ್ರದೇಶದಲ್ಲಿ ಇರುವ ಐಷಾರಾಮಿ ರೆಸ್ಟೋರೆಂಟ್‌ನ ಹೆಸರು. ‌ಬಿಟೌನ್‌ ತಾರೆಯರು ಭೇಟಿ ನೀಡುವ ಅಚ್ಚುಮೆಚ್ಚಿನ ತಾಣ ಇದು. ಈ ರೆಸ್ಟೋರೆಂಟ್‌ಗೆ ದೀಪಿಕಾ ಪಡುಕೋಣೆ ಎಷ್ಟು ಭಾರಿ ಭೇಟಿ ನೀಡಿದ್ದಾರೆ ಎಂಬ ಬಗ್ಗೆಯೂ ಅಂತರ್ಜಾಲ ತಾಣದಲ್ಲಿ ನೆಟ್ಟಿಗರು ಹುಡುಕಾಟದಲ್ಲಿ ಮುಳುಗಿದ್ದಾರೆ.

 
 
 
 

 
 
 
 
 
 
 
 
 

& you...my super drug!💝

Deepika Padukone (@deepikapadukone) ರಿಂದ ಹಂಚಲಾದ ಪೋಸ್ಟ್ ಅವರು ರಂದು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು