ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸಮ್ಮಾನ | ನಾಮನಿರ್ದೇಶಿತಗೊಂಡ ‘ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ’

Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
ಅಕ್ಷರ ಗಾತ್ರ
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿಗೆ ‘ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ನಾಮನಿರ್ದೇಶಿತಗೊಂಡ ಚಿತ್ರಗಳ ವಿವರ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್‌ ನೋಡಿ. prajavani.net/cinesamman/season2

ಜೀವಾ ನವೀನ್‌ ನಿರ್ದೇಶನದ ಚಿತ್ರ ‘‍‍ಪಾಲಾರ್‌’. ಇದೊಂದು ಮಹಿಳಾ ಪ್ರಧಾನ, ಸಂಘರ್ಷದ, ಹೋರಾಟದ ಕಥನ. ತೆಲುಗಿನ ‘ಸಿನಿಮಾ ಬಂಡಿ’ ನಟಿ, ಗಾಯಕಿ ಉಮಾ ವೈ.ಜಿ. ಕೋಲಾರ ಅವರು ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಕೋಲಾರ, ದೇವನಹಳ್ಳಿ ಸುತ್ತಮುತ್ತ ನಡೆದ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಜೀವಾ ನವೀನ್ ಕಥೆ ಬರೆದಿದ್ದಾರೆ. ಜನರ ಹಕ್ಕುಗಳು, ಜಾತಿ ವ್ಯವಸ್ಥೆ, ಶೋಷಿತ ವರ್ಗದ ಮೇಲಿನ ದೌರ್ಜನ್ಯ, ಮರ್ಯಾದೆಗೇಡು ಹತ್ಯೆ, ಮೇಲ್ವರ್ಗದ ದಬ್ಬಾಳಿಕೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಇದರಲ್ಲಿದೆ. ‘ಡೆಕ್ಕನ್‌ ಹೆರಾಲ್ಡ್‌’ನಲ್ಲಿ ಬಂದ  ಲೇಖನವನ್ನು ಸ್ಫೂರ್ತಿಯಾಗಿಟ್ಟುಕೊಂಡು ಜೀವಾ ನವೀನ್‌ ಕಥೆ ಹೆಣೆದಿದ್ದರು. ಸಿನಿಮಾದಲ್ಲಿ ನಾಯಕನಾಗಿ ತಿಲಕ್‌ರಾಜ್ ನಟಿಸಿದ್ದಾರೆ.

***

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ‘ವಿರಾಟಪುರ ವಿರಾಗಿ’ ಮೂಡಿಬಂದಿದೆ. ಹಾನಗಲ್‌ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ಚಿತ್ರವಿದು. ಕುಮಾರ ಶಿವಯೋಗಿಗಳ ಪಾತ್ರದಲ್ಲಿ ನಟ ಸುಚೇಂದ್ರ ಪ್ರಸಾದ್‌ ಇಲ್ಲಿ ನಟಿಸಿದ್ದಾರೆ. ಜಾತಿ ತರತಮಗಳನ್ನು ಹೊಡೆದೋಡಿಸುತ್ತಾ, ಶರಣ ತತ್ತ್ವಗಳನ್ನು ನಿಜಾರ್ಥದಲ್ಲಿ ಅನುಷ್ಠಾನಗೊಳಿಸಿದವರಲ್ಲಿ ಕುಮಾರ ಶಿವಯೋಗಿಗಳು ಪ್ರಮುಖರು. ಇಂತಹ ಅಪರೂಪದ ಚೇತನದ ಕುರಿತು ಸಾಕಷ್ಟು ಅಧ್ಯಯನ ನಡೆಸಿ, ಚಿತ್ರಕಥೆ ಸಿದ್ಧಪಡಿಸಿ ತಯಾರಿಸಿದ ಸಿನಿಮಾವಿದು. ಸಂಗೀತದ ದೃಷ್ಟಿಯಿಂದ, ಸಾಮಾಜಿಕ ಪರಿಣಾಮದ ಪಾಠವೂ ಆಗುವ ಕಾರಣದಿಂದ ಈ ಸಿನಿಮಾ ಭಿನ್ನವೂ ಹೌದು, ಮುಖ್ಯವೂ ಹೌದು.

***

ಈ ಕಾರ್ಯಕ್ರಮ ಕ್ಯಾಸಾಗ್ರ್ಯಾಂಡ್ ಪ್ರಸ್ತುತಪಡಿಸುತ್ತಿರುವ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ. Powered by ಅಮೃತ್ ನೋನಿ ರೀಚ್‌ರೂಟ್‌.

ಬ್ಯಾಂಕಿಂಗ್ ಪಾರ್ಟ್ನರ್: ಕೆನರಾ ಬ್ಯಾಂಕ್.

ಮೊಬಿಲಿಟಿ ಪಾರ್ಟ್ನರ್ : ಮಹೀಂದ್ರಾ,

ಏರ್‌ಲೈನ್ ಪಾರ್ಟ್ನರ್: ಸ್ಟಾರ್ ಏರ್,

ಎನರ್ಜಿ ಪಾರ್ಟ್ನರ್: ಕಾಂತಾರ ಪಾನ್ ಮಸಾಲ,

ಶಾರ್ಟ್ ವಿಡಿಯೊ ಪಾರ್ಟ್ನರ್: ಜೋಶ್.

ಸಹಪ್ರಾಯೋಜಕರು: ಫ್ರೀಡಂ ಆಯಿಲ್, ಟಿಟಿಕೆ ಪ್ರೆಸ್ಟೀಜ್, ಹೋಂಡಾ ಶೈನ್, ಇನ್‌ಸೈಟ್ಸ್ ಐಎಎಸ್, ಹೀರೊ ವಿಡಾ, ಸದ್ಗುರು ಆಯುರ್ವೇದ, ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಲಿ.

ಆಡಿಟ್ ಪಾರ್ಟ್ನರ್: ಅರ್ನ್ಸ್ಟ್ & ಯಂಗ್

ಟೆಲಿಕಾಸ್ಟ್ ಪಾರ್ಟ್ನರ್: ಝೀ ಕನ್ನಡ.

ಪೃಥ್ವಿ ಕೊಣನೂರು ನಿರ್ದೇಶಿಸಿದ ಚಿತ್ರ ‘ಪಿಂಕಿ ಎಲ್ಲಿ?’. ‘ಕಳೆದುಹೋದದ್ದನ್ನು ಹುಡುಕುತ್ತ ಸಾಗುವ’ ಮಾದರಿಯ ಕಥಾವಸ್ತು ಇದರಲ್ಲಿದೆ. ಕಳೆದುಹೋದ ಕೂಸು ‘ಪಿಂಕಿ’ಯನ್ನು ಹುಡುಕುವ ಪ್ರಕ್ರಿಯೆಯಲ್ಲಿ ಹಲವು ಸೂಕ್ಷ್ಮ ಜಗತ್ತುಗಳನ್ನು ಪೃಥ್ವಿ ತೋರಿಸುತ್ತ ಹೋಗುತ್ತಾರೆ. ಇವುಗಳನ್ನು ಬಹಳ ಪರಿಣಾಮಕಾರಿಯಾಗಿ ಅವರು ತೆರೆಮೇಲೆ ತಂದಿದ್ದಾರೆ. ಅಕ್ಷತಾ ಪಾಂಡವಪುರ, ದೀಪಕ್‌ ಸುಬ್ರಹ್ಮಣ್ಯ, ಅನೂಪ್‌ ಶೂನ್ಯ ಎಂಬ ವೃತ್ತಿಪರ ನಟರ ಜೊತೆಗೆ ಗುಂಜಲಮ್ಮ, ಸುಭದ್ರ, ಲಕ್ಷ್ಮಿ ಮೊದಲಾದ ನಟರಲ್ಲದ ನಟ-ನಟಿಯರ ಅಭಿನಯವೂ ಸಾಕಷ್ಟು ಪ್ರಬುದ್ಧವಾಗಿದೆ. 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿತ್ತು.

***

ಶ್ರೀಕಾಂತ್‌ ಕಟಗಿ ನಿರ್ದೇಶನದ ‘ಕ್ಷೇತ್ರಪತಿ’ ಚಿತ್ರದಲ್ಲಿ ನವೀನ್‌ ಶಂಕರ್‌, ಅರ್ಚನಾ ಜೋಯಿಸ್‌, ಅಚ್ಯುತ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರೈತರನ್ನು, ಕೃಷಿ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಕಮರ್ಷಿಯಲ್‌ ರೂಪದಲ್ಲಿ ಹೆಣೆದ ಕಥೆ ಸಿನಿಮಾದಲ್ಲಿದೆ. ರೈತರ ಆರ್ಥಿಕ ಸ್ಥಿತಿ, ವ್ಯವಸ್ಥೆಯ ಕುತಂತ್ರಗಳು, ಕಾರ್ಪೊರೇಟ್‌ ಕಂಪನಿಗಳ ಹಿಡಿತ, ದಲ್ಲಾಳಿಗಳ ಆಟ ಮುಂತಾದ ವಿಷಯಗಳನ್ನು ಪ್ರಸ್ತಾಪಿಸುತ್ತಾ, ಬೆಳೆ ಬೆಳೆಯುವ ಮುನ್ನವೇ ಲಾಭದಾಯಕ ಬೆಲೆ ನಿಗದಿ ಎನ್ನುವ ಕಾನೂನು ಬರಬೇಕು ಎನ್ನುವ ಗಟ್ಟಿಯಾದ ಸಂದೇಶವನ್ನು ಸಿನಿಮಾ ಸಾರಿದೆ. ಉತ್ತರ ಕರ್ನಾಟಕ ಭಾಷೆಯ ಸೊಗಡಿನಲ್ಲಿ ಕಟ್ಟಿಕೊಡಲಾಗಿರುವ ಈ ಸಿನಿಮಾದಲ್ಲಿ ‘ಬಸವ’ ಎಂಬ ಯುವಕನ ಪಾತ್ರದಲ್ಲಿ ನವೀನ್‌ ಜೀವಿಸಿದ್ದಾರೆ.

**

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಒಂದು ಕಥೆಯನ್ನಾಧರಿಸಿದ ಚಿತ್ರ ‘ಡೇರ್‌ ಡೆವಿಲ್‌ ಮುಸ್ತಾಫಾ’. ನಿರ್ದೇಶಕ ಶಶಾಂಕ್‌ ಸೋಗಾಲ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪೂರ್ತಿ ಹಿಂದೂಗಳೇ ಇರುವ ಮೂಡಿಗೆರೆಯ ಕಾಲೇಜಿಗೆ ಪ್ರವೇಶ ಪಡೆಯುವ ಏಕೈಕ ಮುಸ್ಲಿಂ ವಿದ್ಯಾರ್ಥಿ ‘ಮುಸ್ತಾಫಾ’ನ ಬದುಕಿನ ಸುತ್ತ ಚಿತ್ರ ಸಾಗುತ್ತದೆ. ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಚಿತ್ರವಿದು. ಕೋಮುದ್ವೇಷ ಹೇಗೆ ಒಂದು ಊರನ್ನು ಹೊತ್ತಿ ಉರಿಸುತ್ತದೆ, ನಾವು ಹೇಗೆ ಸಹಭಾಳ್ವೆ ನಡೆಸಬೇಕು ಎಂಬುದನ್ನು ನಿರ್ದೇಶಕರು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಸ್ತಾಫಾನ ಪಾತ್ರದಲ್ಲಿ ನಟ ಶಿಶಿರ್‌, ಅಯ್ಯಂಗಾರಿ ಪಾತ್ರದಲ್ಲಿ ನಟ ಆದಿತ್ಯ, ನಾಗಭೂಷಣ್‌ ಕನ್ನಡ ಪ್ರಾಧ್ಯಾಪಕರಾಗಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT