ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Devara Movie| 3 ದಿನಗಳಲ್ಲಿ ₹300 ಕೋಟಿ ದಾಟಿದ ನಟ ಜೂನಿಯರ್ NTR ಅಭಿನಯದ 'ದೇವರ'

Published : 30 ಸೆಪ್ಟೆಂಬರ್ 2024, 11:38 IST
Last Updated : 30 ಸೆಪ್ಟೆಂಬರ್ 2024, 11:38 IST
ಫಾಲೋ ಮಾಡಿ
Comments

ಮುಂಬೈ: ಕೊರಟಾಲ ಶಿವ ನಿರ್ದೇಶನ, ನಟ ಜೂನಿಯರ್ ಎನ್‌ಟಿಆರ್‌ ಅಭಿನಯದ ‘ದೇವರ–1‘ ಚಿತ್ರವು ಬಿಡುಗಡೆಗೊಂಡ ಮೂರು ದಿನಗಳಲ್ಲಿ ಜಾಗತಿಕವಾಗಿ ₹304 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಚಿತ್ರ ತಯಾರಕರು ಸೋಮವಾರ ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ‘ದೇವರ’ ಮಾಹಿತಿ ಹಂಚಿಕೊಂಡಿದೆ. ಚಿತ್ರ ಬಿಡುಗಡೆಗೊಂಡ ಮೊದಲ ದಿನದಲ್ಲಿ ಜಾಗತಿಕವಾಗಿ ₹172 ಕೋಟಿ ಗಳಿಸಿದೆ. ಮೂರನೇ ದಿನದ ಅಂತ್ಯಕ್ಕೆ ಬಾಕ್ಸ್‌ ಆಫೀಸಿನಲ್ಲಿ ₹304 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ತಿಳಿಸಿದೆ.

‘ದೇವರ–1 ಭಾಗ’ ಚಿತ್ರದ ಮೂಲಕ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ. ಜೊತೆಗೆ ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಖಳನಟನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್‌ ಆರ್ಟ್ಸ್‌ನಡಿ ಸುಧಾಕರ್ ಮಿಕ್ಕಿಲಿನೇನಿ ಮತ್ತು ಹರಿಕೃಷ್ಣ, ನಂದಮೂರಿ ಕಲ್ಯಾಣ ರಾಮ್ ನಿರ್ಮಿಸಿದ್ದಾರೆ.

ಈ ಚಿತ್ರ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಐದು ಭಾಷೆಗಳಲ್ಲಿ ಶುಕ್ರವಾರ ಬಿಡುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT