ಕಳೆದ ಕ್ರಿಸ್ಮಸ್‌ಗೆ ಬಿಡುಗಡೆಯಾಗಿದ್ದ ಧನುಷ್ ಮತ್ತು ಸಾಯಿ ಪಲ್ಲವಿ ಅಭಿಯನದ ‘ಮಾರಿ –2’ ಚಿತ್ರ ಗಳಿಕೆಯ ದೃಷ್ಟಿಯಿಂದ ಸಾಧಾರಣ ಚಿತ್ರ. ಆದರೆ, ಆ ಚಿತ್ರದ ಹಾಡುಗಳು ಮತ್ತು ಸಂಗೀತ ತಮಿಳುನಾಡಿನಲ್ಲಿ ಮಾಡಿದ ಮೋಡಿ ಮಾತ್ರ ಅಚ್ಚರಿ ಹುಟ್ಟಿಸುವಂತಹದ್ದು.

ಯುವನ್ ಶಂಕರ್ ರಾಜಾ ಸಂಗೀತ ನೀಡಿದ ‘ರೌಡಿ ಬೇಬಿ’ ಹಾಡು ದೊಡ್ಡ ಮಟ್ಟದ ಹಿಟ್ ಆಗಿದೆ. ಪ್ರಸಕ್ತ ವರ್ಷ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿದ ವಿಡಿಯೊ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟರ ಮಟ್ಟಿಗೆ ಈ ಹಾಡು ಕ್ರೇಜ್ ಹುಟ್ಟು ಹಾಕಿದೆ. ಜಾಗತಿಕ ಮಟ್ಟದಲ್ಲಿ ಈ ಹಾಡು ಏಳನೆ ಸ್ಥಾನದಲ್ಲಿದೆ.

ತಮಿಳು ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿರುವ ಹಾಡಿಗೆ ಪ್ರಭುದೇವ ನೃತ್ಯ ನಿರ್ದೇಶನ ಮಾಡಿದ್ದಾರೆ. ಧೀ ಮತ್ತು ಧನುಷ್ ‘ರೌಡಿ ಬೇಬಿ’ಗೆ ಧ್ವನಿ ನೀಡಿದ್ದಾರೆ.ಈ ಹಿಂದೆ ಧನುಷ್ ಹಾಡಿದ್ದ ‘ವೈ ದಿಸ್ ಕೊಲೆವೆರಿ ಕೊಲೆವರಿ ಡೀ..’ ಹಾಡು ಕೂಡ ಸೂಪರ್ ಹಿಟ್ ಆಗಿತ್ತು. ಈಗ ‘ರೌಡಿ ಬೇಬಿ’ ಹವಾ ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.