2025ರ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಬಿಡುಗಡೆಗೆ ಸಜ್ಜಾಗುತ್ತಿದೆ. ‘ಶಿವ ಶಿವ..’ ಬಳಿಕ ಚಿತ್ರದ ಎರಡನೇ ಹಾಡು ‘ಸೆಟ್ ಆಗಲ್ಲ..’ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಮೂಲಕ ರೀಲ್ಸ್ ಮಾಡುವವರಿಗೆ ಹೊಸ ಅವಕಾಶವೊಂದನ್ನು ಚಿತ್ರತಂಡ ನೀಡಿದೆ.

ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ‘ಸೆಟ್ ಆಗಲ್ಲ..’ ಹಾಡಿಗೆ ಪ್ರೇಮ್ ಅವರೇ ಸಾಹಿತ್ಯ ಬರೆದಿದ್ದು, ಮಿಖಾ ಸಿಂಗ್ ದನಿಯಾಗಿದ್ದಾರೆ. ‘ಈ ಹಾಡಿನ ಶೂಟಿಂಗ್ ಇನ್ನಷ್ಟೇ ಆಗಬೇಕಿದೆ. ಈ ಹಾಡಿಗೆ ಕೇಳುಗರೇ ಕೊರಿಯೊಗ್ರಾಫರ್. ಹಾಡಿಗೆ ಸೂಕ್ತವಾದ ಒಂದು ಹುಕ್ಸ್ಟೆಪ್ ಅನ್ನು ಪ್ರೇಕ್ಷಕರೇ ಹಾಕಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ, ಚಿತ್ರತಂಡಕ್ಕೆ ಕಳುಹಿಸಿ. ಅದರಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡುತ್ತೇವೆ. ಆಯ್ಕೆಯಾದ ಹೆಜ್ಜೆ ಹಾಕಿದವರನ್ನು ಹಾಡು ಬಿಡುಗಡೆ ಸಂದರ್ಭದಲ್ಲಿ ಕರೆಸಿ ಸನ್ಮಾನಿಸುತ್ತೇವೆ’ ಎಂದಿದ್ದಾರೆ ಪ್ರೇಮ್.

‘ಈ ಪ್ರಾಜೆಕ್ಟ್ ಅನ್ನು ಒಂದು ತಪಸ್ಸಿನ ರೀತಿ ಮಾಡಿದ್ದೇವೆ’ ಎಂದು ಮಾತು ಆರಂಭಿಸಿದ ಅರ್ಜುನ್ ಜನ್ಯ, ‘ಭಾರತದ, ವಿದೇಶದ ನುರಿತ ತಂತ್ರಜ್ಞರ ಜೊತೆ ಕೆಲಸ ಮಾಡಿ ಹಾಡುಗಳನ್ನು ತಂದಿದ್ದೇವೆ. ಒಂದೊಂದು ರೆಕಾರ್ಡಿಂಗ್ ಸೆಷನ್ಗೂ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಎಲ್ಲಾ ಭಾಷೆಗಳಲ್ಲೂ ಈ ಹಾಡು ಒಂದಕ್ಕಿಂತ ಒಂದು ಅದ್ಭುತವಾಗಿ ಬಂದಿದೆ’ ಎಂದಿದ್ದಾರೆ.

‘ಮೊದಲ ಹಾಡು ಬಹಳ ಟ್ರೆಂಡ್ ಆಗಿತ್ತು. ಲಕ್ಷಾಂತರ ಜನ ರೀಲ್ಸ್ ಮಾಡಿದ್ದಾರೆ. ಈ ಚಿತ್ರದ ನಿಜವಾದ ಹೀರೊ ಪ್ರೇಮ್. ಸಿನಿಮಾವನ್ನು ಅದ್ಭುತವಾಗಿ ಪ್ರಸ್ತುತಪಡಿಸುವತ್ತ ಅವರ ಗಮನ ಎಂದಿಗೂ ಇದೆ. ರಾಹುಲ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಚೆನ್ನಾಗಿ ಬಂದಿವೆ’ ಎಂದಿದ್ದಾರೆ ಧ್ರುವ ಸರ್ಜಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.