ಭಾನುವಾರ, ಸೆಪ್ಟೆಂಬರ್ 19, 2021
29 °C

#DilBecharaCreatesHistory: ಸುಶಾಂತ್ ಅಂತಿಮ ನಟನೆಗೆ ಭಾವುಕ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್ ಅಭಿನಯದ ಕೊನೆಯ ಚಿತ್ರ ದಿಲ್‌ ಬೇಚಾರ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದ್ದು ಜನರ ಪ್ರಶಂಸೆಗೆ ಪಾತ್ರವಾಗಿದೆ.

ಸುಶಾಂತ್‌ ಅವರನ್ನು ಕೊನೆಯ ಬಾರಿಗೆ ತೆರೆಯ ಮೇಲೆ ನೋಡುತ್ತಿರುವ ಅಭಿಮಾನಿಗಳು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. 

ಈ ಚಿತ್ರದಲ್ಲಿನ ಅಭಿನಯದಿಂದ ಸುಶಾಂತ್‌ ಅವರು ಲಕ್ಷಾಂತರ ಹೃದಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಹಾಡಿಹೊಗಳಲಾಗುತ್ತಿದೆ. 

ಚಿತ್ರದ ತುಣುಕುಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ದಿವಂಗತ ನಟನಿಗೆ ಗೌರವ ಸಲ್ಲಿಸಿದ್ದು, #DilBecharaCreatesHistory ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ವಿಟರ್‌ನಲ್ಲಿ ದಿನವಿಡೀ ಟ್ರೆಂಡ್ ಮಾಡಿದ್ದಾರೆ. 

'ಮತ್ತೊಮ್ಮೆ ಅದು ಸಾಬೀತಾಯಿತು. ನೀವು ಸಾವಿನ ನಂತರವೇ ಎಲ್ಲರ ಪ್ರೀತಿ ಮತ್ತು ಗೌರವ ಪಡೆಯುತ್ತೀರಿ. ಬದುಕಿರುವಾಗ ಯಾರೂ ಕಾಳಜಿ ತೋರಿಸುವುದಿಲ್ಲ' ಎಂದು ಸುಶಾಂತ್‌ ಎಂಬುವವರು ಟ್ವೀಟಿಸಿದ್ದಾರೆ. 

'ಜಗತ್ತು ನ್ಯಾಯದಿಂದ ಕೂಡಿಲ್ಲ. ಮೂರ್ಖರು, ಹೇಡಿಗಳು, ಸುಳ್ಳುಗಾರರು ಹೆಚ್ಚಾಗಿ ಉನ್ನತ ಸ್ಥಳಗಳಲ್ಲಿ ಅಡಗಿಕುಳಿತಿದ್ದಾರೆ. ಜನರು ಸುಶಾಂತ್‌ರನ್ನು ಎಷ್ಟು ದಿನ ನೆನಪಿಸಿಕೊಳ್ಳುತ್ತಾರೆಂದು ತಿಳಿದಿಲ್ಲ' ಎಂದು ಅಣ್ಣ ಎಂಬುವವರು ಹೇಳಿದ್ದಾರೆ.

'ನಿಮ್ಮ ಮರಣದ ನಂತರ ನಾನು ನನ್ನನ್ನು ಕಳೆದುಕೊಂಡೆ ಎಂದು ಅನ್ನಿಸುತ್ತಿದೆ. ನಾನು ನಿಮ್ಮನ್ನು ಎಂದಿಗೂ ಭೇಟಿ ಮಾಡಿಲ್ಲ ಮತ್ತು ನೀವು ನನ್ನ ಬಗ್ಗೆಯೂ ಸಹ ತಿಳಿದಿಲ್ಲ. ಆದರೆ ನೀವು ನಮ್ಮೊಂದಿಗೆ ಇಲ್ಲ ಎಂಬ ಈ ಸತ್ಯವನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಿಲ್ಲ' ಎಂದು ಅನುರಾಗ್‌ ಬಿಸ್ಥ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು