ನಟ ದಿಲೀಪ್ ಕುಮಾರ್ ಚೇತರಿಕೆ: ಎರಡ್ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ

ಮುಂಬೈ: ಬಾಲಿವುಡ್ನ ಖ್ಯಾತ ನಟ ದಿಲೀಪ್ ಕುಮಾರ್ ಅವರಿಗೆ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ಇಲ್ಲಿನ ಪಿ.ಡಿ.ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ‘ಸದ್ಯ ದಿಲೀಪ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದು ಎರಡ್ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಅವರ ಸಾವಿನ ವದಂತಿಗಳನ್ನು ನಂಬಬೇಡಿ’ ಎಂದು ತಿಳಿಸಿದೆ.
ಅವರ ಪತ್ನಿ ಸಾಯಿರಾ ಬಾನು ಅವರು, ಟ್ವೀಟರ್ ಖಾತೆಯನ್ನು ನಿಭಾಯಿಸುತ್ತಿದ್ದು, ಆರೋಗ್ಯ ಸ್ಥಿತಿ ಕುರಿತಂತೆ ಮಾಹಿತಿ ನೀಡುತ್ತಿದ್ದಾರೆ.
Don’t believe in WhatsApp forwards.
Saab is stable.
Thank you for your heart-felt duas and prayers. As per doctors, he should be home in 2-3 days. Insh’Allah.— Dilip Kumar (@TheDilipKumar) June 6, 2021
98 ವರ್ಷದ ದಿಲೀಪ್ ಕುಮಾರ್ ಚಿತ್ಸೆಯ ಉಸ್ತುವಾರಿಯನ್ನು ಹಿರಿಯ ವೈದ್ಯ ಡಾ.ಜಲೀಲ್ ಪಾರ್ಕರ್, ಹೃದ್ರೋಗ ತಜ್ಞ ಡಾ.ನಿತಿನ್ ಗೋಖಲೆ ನೇತೃತ್ವದ ಪರಿಣತರ ತಂಡ ಗಮನಿಸುತ್ತಿದೆ.
ಕಳೆದ ವರ್ಷ ದಿಲೀಪ್ ಕುಮಾರ್ ಅವರ ತಮ್ಮಂದಿರಾದ ಇಶಾನ್ ಖಾನ್ (90) ಮತ್ತು ಅಸ್ಲಂ ಖಾನ್ (88) ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.