ಶುಕ್ರವಾರ, ಫೆಬ್ರವರಿ 21, 2020
29 °C

‘ರಾಧೆ’ ಚಿತ್ರದ ದಿಶಾ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ರಾಧೆ’ ‌ಚಿತ್ರದಲ್ಲಿ ದಿಶಾ ಪಾಟನಿ ಅವರು ಸಲ್ಮಾನ್‌ ಖಾನ್ ಜೊತೆ ಅಭಿನಯಿಸಲಿದ್ದಾರೆ. ‘ಭಾರತ್’ ನಂತರ ದಿಶಾ ಅವರು ಸಲ್ಮಾನ್ ಜೊತೆ ನಟಿಸುತ್ತಿರುವ ಎರಡನೆಯ ಸಿನಿಮಾ ಇದು.

‘ಈ ಚಿತ್ರದಲ್ಲಿ ನಟಿಸಲು ಇಷ್ಟವಿದೆಯೇ ಎಂದು ಸಲ್ಮಾನ್ ಸರ್ ನನ್ನಲ್ಲಿ ಕೇಳಿದರು. ನಾನು ನಟಿಸಲು ಒಪ್ಪಿದೆ. ಈ ಚಿತ್ರ ಒಪ್ಪಿದ್ದಕ್ಕೆ ಕಾರಣಗಳಿವೆ. ಇದರಲ್ಲಿ ಸಲ್ಮಾನ್‌ ನಟಿಸುತ್ತಿರುವುದು ಒಂದು ಕಾರಣ. ಇನ್ನೊಂದು, ಇದರ ನಿರ್ದೇಶಕ ಪ್ರಭುದೇವ’ ಎಂದು ದಿಶಾ ಹೇಳುತ್ತಾರೆ.

ಸಲ್ಮಾನ್ ಅವರಿಗೆ ಎದುರಾಗಿ ನಿಂತು ನಟಿಸುವುದು ಖುಷಿ ಕೊಡುತ್ತದೆ, ಜೊತೆಯಲ್ಲೇ ಭಯವನ್ನೂ ಹುಟ್ಟಿಸುತ್ತದೆ ಎನ್ನುತ್ತಾರೆ ದಿಶಾ. ‘ಸಲ್ಮಾನ್ ಒಬ್ಬ ಸ್ಟಾರ್‌. ಅವರಿಗೆ ಒಂದು ಪ್ರಭಾವಳಿ ಇದೆ. ಭಾರತ್ ಚಿತ್ರದ ಕೆಲಸಗಳ ಸಂದರ್ಭದಲ್ಲಿ ನಾನು ತೆರೆಯ ಹಿಂದೆ ಭಯಪಟ್ಟಿದ್ದು ಇದೆ. ಆದರೆ, ನಿರ್ದೇಶಕರು ಆ್ಯಕ್ಷನ್ ಎಂದು ಹೇಳಿದಾಗ ಎಲ್ಲವನ್ನೂ ಪಕ್ಕಕ್ಕೆ ಇರಿಸಬೇಕಾಗುತ್ತದೆ. ನಿರ್ದೇಶಕರು ಕಟ್ ಎಂದು ಹೇಳಿದ ತಕ್ಷಣ ನನಗೆ ಮತ್ತೆ ಭಯ ಆಗುತ್ತಿತ್ತು’ ಎನ್ನುವುದು ದಿಶಾ ಅವರ ಮಾತು.

‘ರಾಧೆ’ ಚಿತ್ರದಲ್ಲಿ ರಣದೀಪ್ ಹೂಡಾ ಮತ್ತು ಜಾಕಿ ಶ್ರಾಫ್ ಕೂಡ ನಟಿಸುತ್ತಿದ್ದಾರೆ. ಇದು ಈ ವರ್ಷದ ಈದ್ ವೇಳೆಗೆ ಬಿಡುಗಡೆ ಆಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು